About Keyhole

ಬದುಕು ತೆರೆದ ಪುಸ್ತಕವಾಗಿರಬೇಕು. ಅಂತಾರೆ. ಬದುಕನ್ನೇ ಪುಸ್ತಕಕ್ಕೆ ಹೋಲಿಸಿದ ಔದಾರ್ಯ ನಮ್ಮದು. ಒಂದೊಮ್ಮೆ ಎಲ್ಲರನ್ನು ಮುಟ್ಟಿದ್ದ ಪುಸ್ತಕಗಳು ಅದರ ಆಸೆಗೆ ಬಿದ್ದವರ ಕೈಗಷ್ಟೇ ದಕ್ಕುತ್ತೆ. ಪುಸ್ತಕಗಳೇ ಮಾಹಿತಿಯ ಮೂಲವಾಗಿದ್ದ ಕಾಲದಲ್ಲಿ ಎಲ್ಲ ವಿಷಯಗಳು ಪುಟಗಳ ನಡುವೆ ನಮ್ಮ ಬೆರಳಿಗೆ ಎಟಕುತಿತ್ತು. ಆದರೆ ಕಾಲ‌ ಬದಲಾಗಿದೆ. ಜೀವನ ತರಾತುರಿಯಿಂದ ಓಡುತ್ತಿದೆ. ಹಾಳೆಗಳು ಅಪರೂಪಕ್ಕೆ ಮಗ್ಗಲು ಹೊರಳುವ ಕಾಲಕ್ಕೆ ಬುದ್ಧಿಯ ಬಂಡವಾಳಕ್ಕೊಂದು ಪರ್ಯಾಯ ವ್ಯವಸ್ಥೆ ಬೇಕೆನ್ನುವ ಕಾರಣಕ್ಕೆ ನಿಮ್ಮ ಮುಂದೆ ತೆರೆದು ಕೊಳ್ಳುತ್ತಿದೆ.. ಕೀ ಹೋಲ್ ಡಾಟ್ ಇನ್… keahole.in ಶೀರ್ಷಿಕೆಯಲ್ಲಿ Open to explore… ಅಡಿ ಬರಹದೊಂದಿಗೆ ನಿಮ್ಮನ್ನು ಎದುರುಗೊಳ್ಳುತ್ತಿರುವ ಜಾಲತಾಣವಿದು. ಇದರಲ್ಲಿ ಆರೋಗ್ಯ, ಸೌಂದರ್ಯ, ಆಧ್ಯಾತ್ಮ, ಪಾಕ ವಿಷಯ, ಪ್ರೀತಿ -ಪ್ರೇಮ- ಪ್ರಣಯ, ಬದುಕು ಜಟಕಾ ಬಂಡಿ, ಮನೆ- ವಠಾರ, ಮಕ್ಕಳ ಮನೆ, ಸಾಹಿತ್ಯ, ಸಿನೆಮಾ..ಹೀಗೆ ನಾನಾ ವಿಭಾಗಗಳಿದ್ದು ಆ ಸಂಬಂಧಿ ಮಾಹಿತಿ ವಿಚಾರಗಳಿವೆ. ಎಲ್ಲಾ ವಿಷಯಗಳನ್ನು ಸರಳವಾಗಿ ಮಂಡಿಸುವ ಮೂಲಕ ಪುಸ್ತಕದ ಭಾವನಾತ್ಮಕ ಭಾವ ಜಾಲವನ್ನು ನಿಮ್ಮತ್ತ ತಲುಪಿಸುವ ಪ್ರಯತ್ನ‌ ನಮ್ಮದು . ನಿಮ್ಮ ಸಹಕಾರವಿರಲಿ..

+1
error: Content is protected !!