
ಒಂದು ಗಂಭೀರ ಸಮಸ್ಯೆ ಬಗ್ಗೆ ನಮಗೆ ನಿಮಗೆ ಗೊತ್ತಿಲ್ಲ. ಅದೇ ನಾವು ಕೂರುವ ಭಂಗಿ. ವಿಶೇಷವಾಗಿ ಇದು ಹೆಣ್ಮಕ್ಕಳಿಗೆ ಸಂಬಂಧಪಟ್ಟಿರುವಂಥಹದ್ದು. ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಕಾಲ ಮೇಲೆ ಕಾಲು ಹಾಕಿ ಕೂರುವ ಅಭ್ಯಾಸ ಇದೆಯಾ..? ಹಾಗಾದ್ರೆ ಅದರಿಂದಾಗುವ ಸಮಸ್ಯೆ ಬಗ್ಗೆ ಅವರಿಗೆ ತಿಳಿ ಹೇಳಿ. ಆ ಅಭ್ಯಾಸವನ್ನು ಬದಲಾಯಿಸಿ. ಹಾಗೆ ಕೂರೋದ್ರಿಂದ ಕಂಫರ್ಟ್ ಸಿಗುತ್ತೆ ಅನ್ನೋ ಕಾರಣಕ್ಕೆ ಅದನ್ನು ನೆಚ್ಚಿಕೊಳ್ತಾರೆ. ಆದ್ರೆ ಅಸಲಿ ಪ್ರಾಬ್ಲಂ ಇಲ್ಲಿದೆ ನೋಡಿ.
ಪಾರ್ಶ್ವ ವಾಯು ಸಮಸ್ಯೆ ಬರಬಹುದು..
ಕಾಲ್ ಮೇಲೆ ಕಾಲುಹಾಕಿ ಕೂತಿದ್ರೆ ನೋಡೋಕೆ ಚಂದ. ಹೆಂಗಸರಂತೂ ಈ ಬಗ್ಗೆ ಮಾತಾಡಂಗಿಲ್ಲ. ಆದ್ರೆ, ಹೀಗೆ ನಿರಂತರವಾಗಿ ಕೂತ್ರೆ ನಿಮಗೆ ಒಂದಿಷ್ಟು ತೊಂದರೆಯಾಗೋ ಸಾಧ್ಯತೆಗಳಿವೆ. ಅದ್ರಲ್ಲಿ ಒಂದು ಲಕ್ವಾ. ಯೆಸ್ ,ನೀವೇ ಗಮನಿಸಿ.. ಕಾಲ್ ಮೇಲೆ ಕಾಲ್ ಹಾಕ್ಕೊಂಡಿದ್ರೆ ಒತ್ತಡ ಎಲ್ಲಿಗೆ ಬೀಳುತ್ತೆ..? ಹಾಗಾಗಿ, ಗಂಟೆಗಟ್ಟಲೆ ಹೀಗೇ, ಕೂತ್ರೆ ನರಗಳಲ್ಲಿ ರಕ್ತಪರಿಚಲನೆ ಏರುಪೇರಾಗಿ ವ್ಯತ್ಯಾಸವಾಗಬಹುದು. ಪ್ಯಾರಾಲಿಸಿಸ್ ಅಥವಾ ಪಾಲ್ಸಿ ಆಗೋದು ಈ ರೀತಿ ಕುಳಿತುಕೊಳ್ಳುವುದರಿಂದನೇ ನೆನಪಿರಲಿ. ಪೆರೋನಿಯಲ್ ನರ್ವ್ ಪಾಲ್ಸಿ ಆಗೋಕೆ ಕಾರಣ ಈ ಭಂಗಿಯಲ್ಲಿ ಕೂರುವ ಚಾಳಿ..
ರಕ್ತದೊತ್ತಡ ಹೆಚ್ಚುವ ಸಾಧ್ಯತೆ ಹೆಚ್ಚು
ಹೀಗೆ,ತಾಸುಗಟ್ಟಲೆ ಕ್ರಾಸ್ ಕಾಲಲ್ಲಿ ಕೂತರೆ ಒತ್ತಡದ ಪರಿಣಾಮವಾಗಿ ರಕ್ತ ಪರಿಚಲನೆ ವ್ಯತ್ಯಾಸವಾಗೋದು ಗ್ಯಾರೆಂಟಿ. ಇದರ ಪಾರ್ಶ್ವ ಪರಿಣಾಮವೇ ರಕ್ತದೊತ್ತಡ ಹೆಚ್ಚುವುದು. ಹೀಗಾಗಿ ನಾನಾ ಪ್ರಾಬ್ಲಂಗಳು ಶುರುವಾಗೋ ಸಾಧ್ಯತೆ ಇಲ್ಲದಿಲ್ಲ. ಇಂಥ ಅಭ್ಯಾಸವಿದ್ರೆ ಈ ಕೂಡಲೆ ಬಿಟ್ಹಾಕಿ. ಎಲ್ಲಾ ಸರಿಹೋಗುತ್ತೆ..
ರಕ್ತ ಸರಿಯಾಗಿ ಪಂಪ್ ಆಗದಿದ್ದರೆ..?
ಕಾಲ್ ಮೇಲೆ ಕಾಲು ಹಾಕಿ ಸ್ಟೈಲಾಗಿ ನೀವು ಕೂತಿರ್ತೀರಾ. ನಿಮಗೊಂದು ವಿಷಯ ಗೊತ್ತಿರಲಿ ನಮ್ಮ ರಕ್ತ ಪರಿಚಲನೆಯ ಮುಖ್ಯ ನಾಳಗಳು ತೊಡೆಯ ಮುಖಾಂತರವೇ ಹಾದು ಹೋಗಿರುತ್ತೆ. ಅಲ್ಲಿಗೆ ನಾವು ಅಗತ್ಯಕ್ಕಿಂತ ಹೆಚ್ಚು ಹೊತ್ತು ಒತ್ತಡ ಹಾಕಿದ್ರೆ ಅಷ್ಟೇ..! ರಕ್ತ ಸರಿಯಾಗಿ ಪಂಪ್ ಆಗಲ್ಲ. ಹೃದಯವಂತೂ ರಕ್ತ ಪಂಪ್ ಮಾಡ್ತಾನೇ ಇರುತ್ತೆ. ಆದ್ರೆ ತೊಡೆಯ ಪಕ್ಕ ಅದು ಬ್ಲಾಕ್ ಆಗಿ ರಕ್ತ ಕಾಲೆಬೆರೆಳುಗಳತ್ತ ಚಲಿಸುವುದು ಬಿಟ್ಟು ಮರಳಿ ಎದೆಯತ್ತ ಸಾಗುವ ಛಾನ್ಸ್ ಇಲ್ಲದಿಲ್ಲ. ಹೀಗಾಗುವುದರಿಂದ ತುಂಬಾನೇ ತೊಂದರೆಯಾಗುತ್ತೆ. ಕಾಲು ಜೋಮು ಹಿಡಿಯುವ ಅಪಾಯ ಕೂಡಾ ಕಾಡುತ್ತೆ.
ಸೊಂಟದ ಮೂಳೆಗಳಿಗೆ ಘಾಸಿ..
ನಿಜ ಹೇಳಬೇಕಿದ್ರೆ ಕಾಲಿನ ಮೇಲೆ ಕಾಲು ಹಾಕಿ ಕೂರುವ ಭಂಗಿ ಆರೋಗ್ಯಕಾರಿ ಭಂಗಿಯಲ್ಲ. ಈ ರೀತಿ ಕೂರುವುದರಿಂದ ಪೆಲ್ವಿಕ್ ಭಾಗಕ್ಕೆ ಹಾನಿಯಾಗುತ್ತೆ. ಹೀಗೆ, ಫೋರ್ಸ್ ಪುಲ್ಲಿ ಕೂರುವ ಕಾರಣಕ್ಕೆ ತೊಡೆಯ ಒಳಭಾಗದ ಮಾಂಸಖಂಡಗಳು ತೆಳುವಾಗುತ್ತವೆಯಂತೆ. ಮತ್ತು ಕೀಲುಗಳ ಮೇಲೆ ಒತ್ತಡ ಬೀಳುವ ಕಾರಣಕ್ಕೆ ಮೂಳೆಯ ಏರುಪೇರಿಗೂ ಕಾರಣವಾಗಬಹುದು. ಹಾಗಾಗಿ, ಹೀಗೆ ಕ್ರಾಸ್ ಲೆಗ್ ಸಿಟ್ಟಿಂಗ್ ಅಭ್ಯಾಸಕ್ಕೆ ಪುಲಿಸ್ಟಾಪ್ ಹಾಕಿ ಬಿಡಿ ಹೆಲ್ತಿಯಾಗಿ..
ಜೇಡರ ನರ ಅನ್ನೋ ವಿಚಿತ್ರ ಸಮಸ್ಯೆ..
ಹೀಗೆ, ಕೂರುವುದರಿಂದ ಆಗೋ ಮತ್ತೊಂದು ಮೇಜರ್ ಪ್ರಾಬ್ಲಂ ಜೇಡರ ನರ. ಹೀಗೆ ಕಾಲ್ ಮೇಲೆ ಕಾಲ್ ಹಾಕಿ ಎರಡು ಕಾಲಿಗೂ ಒತ್ತಡ ಬೀಳುವ ಹಾಗೆ ಕೂರೋದ್ರಿಂದ ನರಗಳು ಅಸ್ವಾಭವಿಕವಾಗಿ ಉಬ್ಬಿಕೊಳ್ಳುವ ವ್ಯಾಧಿ ಕಾಡಬಹುದು. ನರಗಳು ಸಾಮಾನ್ಯವಾಗಿ ಸ್ಥಿತಿಸ್ಥಾಪಕ ಗುಣವನ್ನು ಹೊಂದಿರುತ್ತದೆ. ಆದ್ರೆ, ಹೀಗೆ, ಒತ್ತಡ ಬೀಳುವ ಕಾರಣಕ್ಕೆ ಅದು ಉಬ್ಬಿ ತನ್ನ ಸ್ಥಿತಸ್ಥಾಪಕ ಗುಣವನ್ನು ಕಳೆದುಕೊಳ್ಳುವ ಕಾರಣಕ್ಕೆ ಸಮಸ್ಯೆ ಉಂಟಾಗುತ್ತೆ. ಹಾಗಾಗಿ, ಎಚ್ಚರ.
ಬೆನ್ನು ನೋವಿಗೆ ಇಂಥಾ ಕಾರಣ..
ಕಾಲು ಮೇಲೆ ಕಾಲು ಹೆಣೆದು ಬಿಗಿಯಾಗಿ ಗಂಟೆಗಟ್ಟಲೆ ಕೂತವರಿಗೆ ಬೆನ್ನು ನೋವು, ಸೊಂಟನೋವು ಕಟ್ಟಿಟ್ಟ ಬುತ್ತಿ. ಒಂದು ಅಧ್ಯಯನ ಪ್ರಕಾರ ಹೀಗೆ ಏಕಸ್ಥಿತಿಯಲ್ಲಿ ದಿನಕ್ಕೆ ಮೂರು ಗಂಟೆಗೂ ಹೆಚ್ಚುಕಾಲ ಕೂತರೆ ಬೆನ್ನ ಬಾಗೋದು ಕೂಡಾ ಆಗಬಹುದು. ಬೆನ್ನುಹುರಿಯ ಸಮತೋಲನ ಹದ ತಪ್ಪಿ ಕತ್ತು ನೋವು ಕೂಡಾ ಬರಬಹುದು. ಸೊಂಟದ ಭಾಗದಲ್ಲೂ ಇರಿಸುಮುರಿಸು ಉಂಟಾಗಬಹುದು. ಹಾಗಾಗಿ, ಅಭ್ಯಾಸವಾಗಿ ಹೀಗೆ ಕೂರ್ತಿರೋ ಇಲ್ಲ, ಸ್ಟೈಲಿಗೆ ಕೂರ್ತಿರೋ ಎಲ್ಲವನ್ನು ಬಿಟ್ಟು ಬಿಡಿ. ಆರೋಗ್ಯ ಕಾಪಾಡಿ..
ನಿಜ ಹೇಳಿ ಎಲ್ಲದಕ್ಕಿಂತಲೂ ಆರೋಗ್ಯ ಮುಖ್ಯ ಅಲ್ವಾ ಹಾಗಾಗಿ ನೀವು ನಿಮ್ಮ ಕೂರುವ ಭಂಗಿಯನ್ನು ಹೆಲ್ತಿಯಾಗಿ ಬದಲಾಯಿಸಿಕೊಳ್ಳಿ..
ವಿಷಯ ಸೂಚನೆ – ಯಾವುದೇ ರೀತಿಯ ಆರೋಗ್ಯ ಸೌಂದರ್ಯ ಸಮಸ್ಯೆಗಳಿಗೆ ವೈದ್ಯರು ಮತ್ತು ತಜ್ಞರು ಹೆಚ್ಚಿನ ಸಲಹೆ ನೀಡಬಲ್ಲರು. ಸಮಸ್ಯೆ ಯಾವುದೇ ಇದ್ರೂ ವೈದ್ಯರನ್ನು ಬೇಟಿಯಾಗೋದು ಉತ್ತಮ.