ರಾಸಾಯನಿಕ, ಬಿಸಿಲು, ಧೂಳು ಇವೆಲ್ಲವುಗಳಿಂದ ನಿಧಾನವಾಗಿ ತ್ವಚೆ ಹಾಳಾಗ್ತಾನೇ ಹೋಗುತ್ತೆ. ಬರಬರುತ್ತಾ ಸೌಂದರ್ಯ ಕೂಡಾ ಹಾಳಾಗುತ್ತೆ. ಇದ್ರಿಂದ ಬಚಾವಾಗಲು ನೈಸರ್ಗಿಕ ವಸ್ತುಗಳಿಗಿಂತ ಉತ್ತಮ ಆಯ್ಕೆ ಬೇರೆ ಯಾವುದು ಇರಲು ಸಾಧ್ಯವಿಲ್ಲ.. ಇದ್ರಿಂದ ಯಾವುದೇ ರೀತಿಯ ಅಪಾಯ ಕೂಡ ಆಗೋದಿಲ್ಲ.. ಜೊತೆಗೆ ತ್ವಚೆ ತುಂಬಾ ನವಿರಾಗುತ್ತೆ, ಆರೋಗ್ಯಕಾರಿಯಾಗಿರುತ್ತೆ. ಹೀಗೆ ಹಾಳಾದ ತ್ವಚೆಯನ್ನು ಸರಿಪಡಿಸುವ ಕೆಲವೊಂದು ವಿಧಾನಗಳು ಇಲ್ಲಿವೆ.

ಜೇನು
ಜೇನು ಒಂದು ನ್ಯಾಚುರಲ್ ಮಾಯಿಶ್ಚರೈಸರ್ ಆಗಿದೆ. ಇದುತ್ವಚೆಯನ್ನು ನವಿರಾಗಿಸುತ್ತದೆ.ಅದರ ಜೊತೆಗೆ ಇದರಲ್ಲಿರುವ ಮೈಕ್ರೋಬಿಯಲ್ ಪ್ರಾಪರ್ಟಿ ತ್ವಚೆ ಹಾಳಾಗೋದನ್ನು ತಡೆಯುತ್ತದೆ. ಪ್ರತಿದಿನ ಮುಖ ಮತ್ತು ಕತ್ತಿಗೆ ಜೇನನ್ನು ಹಚ್ಚಿ 10 ನಿಮಿಷದ ಬಳಿಕ ಮುಖ ತೊಳೆದರೆ ಸಾಕು. ತ್ವಚೆ ಸೇಫಾಗಿರುತ್ತದೆ.
ಅಲೋವೆರಾ
ಅಲೋವೆರಾ ತ್ವಚೆ ಹಾಳಾಗೋದನ್ನು ಬೇಗನೇ ಕಡಿಮೆ ಮಾಡುತ್ತದೆ.. ಇದನ್ನು ಬಳಕೆ ಮಾಡುವುದರಿಂದ ಮುಖ ತಾಜಾ ಮತ್ತು ಕಾಂತಿಯುತವಾಗುತ್ತೆ. ಇದಕ್ಕಾಗಿ ಅಲೋವೆರಾ ಜೆಲ್ ತೆಗೆದುಕೊಂಡು ಫ್ರಿಜ್‌ನಲ್ಲಿ10 ನಿಮಿಷ ಇಡಬೇಕು. ಅದನ್ನು ಮಲಗುವ ಮುನ್ನ ಮುಖ, ಕುತ್ತಿಗೆಗೆ ಹಚ್ಚಿ. ಬೆಳಗ್ಗೆ ತೊಳೆದರೆ ತ್ವಚೆ ಆರೋಗ್ಯಕಾರಿಯಾಗಿರುತ್ತೆ.
ಬ್ಲ್ಯಾಕ್ ಟೀ

ಬ್ಲಾಕ್ ಟೀನಲ್ಲಿರುವ ಆ್ಯಂಟಿ ಆಕ್ಸಿಡೆಂಟ್ಸ್ ಮತ್ತು ಟ್ಯಾನಿನ್ ಅಂಶ ಹಾಳಾದ ತ್ವಚೆಯ ಸಮಸ್ಯೆಗೆ ಪರಿಹಾರ ನೀಡುತ್ತೆ.. ಅಲ್ಲದೆ ಇದು ತ್ವಚೆಯ ಪಿಎಚ್ ಬ್ಯಾಲೆನ್ಸ್ ಆಗಿರಲು ಸಹಾಯ ಮಾಡುತ್ತೆ.. ಇದಕ್ಕಾಗಿ ನೀವು ಅರ್ಧ ಕಪ್ ನೀರಿನಲ್ಲಿ ಒಂದು ಟೀ ಬ್ಯಾಗ್ ಹಾಕಿ ಕುದಿಸಿ. ಮೊದಲು ಮುಖವನ್ನು ತೊಳೆದಾದ ಬಳಿಕ ಅದು ತಣ್ಣಗಾದ ಬ್ಲಾಕ್ ಟೀ ಮಿಶ್ರಣವನ್ನು ಹತ್ತಿಯ ಸಹಾಯದಿಂದ ಮುಖಕ್ಕೆ ಹಚ್ಚಿ. ಒಣಗಿದ ನಂತರ ತೊಳೆಯಿರಿ..
ಮೊಸರು
ತ್ವಚೆಯ ಮೇಲೆ ಮೊಸರು ಬಳಸುವುದರಿಂದ ಹಾಲಾದ ತ್ವಚೆ ಮತ್ತು ಸನ್ ಬರ್ನ್ ಸಮಸ್ಯೆ ಕಡಿಮೆಯಾಗುತ್ತೆ. ಅಲ್ಲದೇ ಮೊಸರು ಅಲ್ಲದೆ ತ್ವಚೆಯ ಪಾಲಿಗೆ ಮಾಯಿಶ್ವರೈಸರ್ ಆಗಿ ಕೂಡ ಕೆಲಸ ಮಾಡುತ್ತದೆ.. ಪ್ರತಿದಿನ ಸ್ವಲ್ಪ ಮೊಸರು ತೆಗೆದುಕೊಂಡು ಮುಖಕ್ಕೆ ಹಚ್ಚಿ ಒಣಗಿದ ಮೇಲೆ ತೊಳೆದರೆ ತ್ವಚೆ ಕಾಂತಿಯುತವಾಗುತ್ತೆ.

ಹಾಲು
ಹಾಲಿನಲ್ಲಿರುವ ಅನುಕೂಲಕಾರಿ ಅಂಶ ತ್ವಚೆ ಹಾಳಾಗೋದನ್ನು ತಡೆಯುತ್ತದೆ. ಅಲ್ಲದೆ ತ್ವಚೆ ತೇವಾಂಶ ಕಾದುಕೊಳ್ಳುವಂತೆ ನೋಡಿಕೊಳ್ಳುತ್ತದೆ. ಅದಕ್ಕಾಗಿ ಒಂದು ಚಮಚ ಹಸಿ ಹಾಲು ತೆಗೆದುಕೊಂಡು 10 ನಿಮಿಷ ಫ್ರೀಜರ್‌ನಲ್ಲಿಡಬೇಕು. ಇದರ ನಂತರ ಹತ್ತಿಯ ಸಹಾಯದಿಂದ ಅದನ್ನು ಮುಖದ ಮೇಲೆ ಹಚ್ಚಿ. ಆ ಬಳಿಕ ಮುಖ ತೊಳೆಯಿರಿ. ಸ್ವಲ್ಪ ದಿನ ಕಾಲ ಇದನ್ನು ಮುಂದುವರೆಸಿ.