0
ಕ್ವಾರಂಟೈನ್ ಮುಕ್ತರಾದ ಪಾಟ್ನಾ ಪೊಲೀಸರು ತವರಿಗೆ..!
ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣದ ತನಿಖೆಗಾಗಿ ಮುಂಬೈ ತೆರಳಿದ್ದ ತನಿಖಾಧಿಕಾರಿ ಸೇರಿದಂತೆ ಬಿಹಾರ ಪೊಲೀಸ್ ತಂಡದ ನಾಲ್ವರು ಅಧಿಕಾರಿಗಳು ಮತ್ತೆ ಪಾಟ್ನಾಕ್ಕೆ ಮರಳಿದ್ದಾರೆ. ತನಿಖೆಗಾಗಿ ಮುಂಬೈಗೆ, ತೆರಳಿದ್ದ ಪಾಟ್ನಾ ಪೊಲೀಸ್ ವರಿಷ್ಠಾಧಿಕಾರಿ ವಿನಯ್ ತಿವಾರಿ ಅವರನ್ನು ಕೊರೊನಾ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಕ್ವಾರಟೇನ್ ಮಾಡಲಾಗಿತ್ತು. ತನಿಖೆಗಾಗಿ ಮುಂಬೈ ತೆರಳಿದ್ದ 7 ಮಂದಿಗಳ ಪೈಕಿ ಒಬ್ಬರನ್ನು ಕ್ವಾರಂಟೈನ್ ಮಾಡಲಾಗಿತ್ತು. 14 ದಿನ ಅವರನ್ನು ಕ್ವಾರಂಟೈನ್ ಮಾಡಲಾಗುವುದೆಂದು ಮುಂಬೈ ಮಹಾನಗರ ಪಾಲಿಕೆ ತಿಳಿಸಿತ್ತು.
ತನಿಖಾಧಿಕಾರಿಯನ್ನು ಕ್ವಾರಂಟೈನ್ ಮುಕ್ತಗೊಳಿಸುವಂತೆ ಮುಂಬೈ ಪೊಲೀಸರಿಗೆ ಬಿಹಾರ ಡಿ ಐಜಿ ಗುಪ್ತೇಶ್ವರ್ ಪಾಂಡೆ ಪತ್ರ ಮುಖೇನ ವಿನಂತಿಸಿದ್ದರು. ಆದ್ರೆ ಅದಕ್ಕೆ ಮುಂಬೈ ಪೊಲೀಸರು ಸೊಪ್ಪು ಹಾಕಿರಲಿಲ್ಲ. ಹಾಗಾಗಿ ನ್ಯಾಯಾಯದ ಮೆಟ್ಟಿಲೇರುವ ನಿರ್ಧಾರಕ್ಕೆ ಬರಲಾಗಿತ್ತು. ನ್ಯಾಯಾಲಯದ ಮೊರೆಹೋಗುವ ನಿರ್ಧಾರ ಹೊರ ಬಂದ ಕೂಡಲೇ ತನಿಖಾಧಿಕಾರಿಗಳನ್ನು ಕ್ವಾರಂಟೈನ್ ಮುಕ್ತಗೊಳಿಸಲಾಗಿದೆ. ಅದಾಗಲೇ ನಾಲ್ವರು ಪೊಲೀಸರು ಮುಂಬೈನಿಂದ ಪಾಟ್ನಾ ಹಿಂತಿರುಗಿದ್ದು, ವಿನಯ್ ತಿವಾರಿ ಪಾಟ್ನಾ ಹೊರಟಿದ್ದಾರೆ.
ಪಾಟ್ನಾ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಕಣವನ್ನು ಸಿಬಿಐಗೆ ಒಪ್ಪಿಸುವಂತೆ ಶಿಫಾರಸು ಮಾಡಿದ ಬಳಿಕ ಈ ಅಧಿಕಾರಿಗಳು ಪಾಟ್ನಾಗೆ ಹಿಂತಿರುಗಿದ್ದಾರೆ.