ಒಳಗೆ ಮಗನ ಮದುವೆ.. ಹೊರಗೆ ಅಪ್ಪನ ಮೇಲೆ ಗುಂಡಿನ ದಾಳಿ.. ಇಂಥ ಪ್ರಸಂಗ ಯಾರಿಗೂ ಬರಬಾರದು..!
ಇದು ಹಳೆ ಹುಬ್ಬಳ್ಳಿಯ ಕತೆ. ಗುರುವಾರ ಅಲ್ಲಿ ನೋಡು ನೋಡುತ್ತಿದ್ದಂತೆ ಹಳೇ ರೌಡಿ ಶೀಟರ್ ಫ್ರೂಟ್ ಇರ್ಫಾನ್ ಮೇಲೆ ಗುಂಡಿನ ದಾಳಿಯಾಗಿದೆ. ಹಳೆ ಹುಬ್ಬಳ್ಳಿ ರಸ್ತೆಯ ದೇವರ ಗುಡಿಹಾಳದ ಬಳಿಯಿರುವ ಅಲ್ ತಾಜ್ ಹೊಟೇಲ್ ಮುಂಭಾಗದಲ್ಲಿ ಗುರುವಾರ ಈ ಘಟನೆ ನಡೆದಿತ್ತು. ಅಲ್ಲೇ ಕೂಗಳತೆಯ ದೂರದಲ್ಲಿ ಮಗನ ವಿವಾಹ ಕಾರ್ಯ ನಡೀತಿದ್ದು, ಹಾಲ್ ಮುಂಭಾಗದಲ್ಲಿ ಫೋನಿನಲ್ಲಿ ಮಾತನಾಡುತ್ತಿದ್ದ ಇರ್ಫಾನ್ ಮೇಲೆ ಗುಂಡಿನ ದಾಳಿಯಾಗಿತ್ತು.
ಗುರುತು ಪರಿಚಯವಿಲ್ಲದ 6 ಮಂದಿ ಇರ್ಫಾನ್ ಮೇಲೆ ನಡೆಸಿದ್ದು, ರಸ್ತೆಯಲ್ಲೇ ರಕ್ರದ ಮಡುವಿನಲ್ಲಿ ಕುಸಿದು ಬಿದ್ದ ಫ್ರೂಟ್ ಇರ್ಫಾನ್ ಅವರನ್ನು ಸಂಬಂಧಿಕರು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದ್ರೆ ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.