ಬೆಂಗಳೂರು: ಕೋವಿಡ್ ಕರ್ತವ್ಯ ನಿರತರಾಗಿದ್ದು ಕೆಲಸದ ಅವಧಿಯಲ್ಲಿ ಮೃತಪಟ್ಟ ರಾಜ್ಯ ಸರಕಾರಿ ಉದ್ಯೋಗಿಗಳ ಕುಟುಂಬಕ್ಕೆ ಬಲ ನೀಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ. ಕರ್ತವ್ಯದ ವೇಳೆ ಮೃತಪಟ್ಟ ಸರ್ಕಾರಿ ನೌಕರರಿಗೆ 30 ಲಕ್ಷ ಪರಿಹಾರ ಧನ ನೀಡಲು ಮುಂದಾಗಿದೆ. ಈ ಸಂಬಂಧ ಆದೇಶ ಕೂಡಾ ಹೊರಡಿಸಿದೆ.
ಈ ಹಿಂದೆ ಕೋವಿಡ್ ಕರ್ತವ್ಯದ ವೇಳೆ ಮೃತಪಟ್ಟವರ ಕುಟುಂಬಕ್ಕೆ ಮನೋಸ್ಥೈರ್ಯ ಕೊಡುವ ನಿಟ್ಟಿನಲ್ಲಿ ವಿಮಾ ಸೌಲಭ್ಯ ಒದಗಿಸುವಂತೆ ರಾಜ್ಯ ಸರ್ಕಾರಿ ನೌಕರರ ಸಂಘ ಮನವಿಮಾಡಿತ್ತು. ಹಾಗೇ ಕೋವಿಡ್ ಚಕಿತ್ಸಾ ವೆವೆಚ್ಚ ಭರಿಸುವಂತೆ ರಾಜ್ಯ ಸರ್ಕಾರಿ ನೌಕೃ ಸಂಘದ ಅಧ್ಯಕ್ಷ ಸಿ ಎಸ್ ಷಡಕ್ಷರಿ ವಿನಂತಿ ಮಾಡಿದ್ರು. ಇದಕ್ಕೆ ರಾಜ್ಯ ಸರ್ಕಾರ ಪುರಸ್ಕಾರ ನೀಡಿದೆ. ಈಗ ಕೋವಿಡ್ ಕರ್ತವ್ಯದಲ್ಲಿರುವ ನೌಕರರು ಸೋಂಕಿಗೆ ಒಳಗಾದರೆ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ. ಹಿಂದೆ ಕೋವಿಡ್ ಸೇನಾನಿಗಳಿಗೆ ಈ ಸೌಲಭ್ಯವಿತ್ತು.ಈಗ ಅದನ್ನು ರಾಜ್ಯ ಸರ್ಕಾರಿ ನೌಕರರಿಗೂ ವಿಸ್ತರಿಸಿದ ಹಾಗಾಗಿದೆ.
0