0
ಬೆಂಗಳೂರು: ಕೊರೊನಾ ಬಿಕ್ಕಟ್ಟಿನ ನಡುವೆ ರಾಜಧಾನಿ ನಗರದಲ್ಲಿ ರೌಡಿಗಳ ಪುಂಡಾಟ ಜಾಸ್ತಿಯಾಗಿದ್ದು, ಅದಕ್ಕೆ ಕಡಿವಾಣ ಹಾಕುವ ಕ್ರಮಕ್ಕೆ ಖಾಕಿ ಮುಂದಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲವಾರು ರೌಡಿ ಶೀಟರ್ ಗಳ ಮನೆಗೆ ಪೋಲೀಸರು ದಿಢೀರ್ ದಾಳಿ ಮಾಡಿದ್ದಾರೆ.
ಈ ದಿಢೀರ್ ದಾಳಿಯಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ರಗಳನ್ನು ವಶ ಪಡಿಸಲಾಗಿದೆ. ರೌಡಿ ಚಟುವಟಿಕೆಗಳು ಹೆಚ್ಚಾದ ಕಾರಣ ಪ್ರಮುಖ ರೌಡಿ ಶೀಟರ್ ಗಳಾದ ಬಂಡೆ ಮಂಜ ,ಹುಸ್ಕೂರು ಶಿವ, ಬೆತ್ತನಗೆರೆ ಮಂಜ, ಪಾಯ್ಸನ್ ರಾಮ, ಖಾಸಿಂ, ಶರವಣ, ನಾಗರಾಜ, ಮಂಜ ಮೊದಲಾದ 70 ಕ್ಕೂ ಹೆಚ್ಚು ಜನರ ಮನೆ ಮೇಲೆ ರಾತ್ರೋರಾತ್ರಿ ದಾಳಿ ನಡೆದಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕರ ಸೂಚನೆ ಮೇರೆಗೆ ಈ ದಾಳಿ ಸಂಘಟಿಸಲಾಗಿದ್ದು, ರೌಡಿ ಶೀಟರ್ ಗಳಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ.