ಕೊರೊನಾ ದೇಶದೆಲ್ಲೆಡೆ ಅಬ್ಬರಿಸುತ್ತಿದೆ. ಈ ಕಾಲಕ್ಕೆ ರೋಗನಿರೋಧಕ ಶಕ್ತಿ ಹೆಚ್ಚಿಸಬೇಕು ಅನ್ನೋದು ಎಲ್ಲರಿಗೂ ಗೊತ್ತಿರೋ ಸಂಗತಿ. ಆದ್ರೆ ರೋಗನಿರೋಧಕ ಶಕ್ತಿ ಹೆಚ್ಚಿಸಲು ಏನು ತಿನ್ನಬೇಕು ಅನ್ನೋದು ಯಾರಿಗೂ ಗೊತ್ತಿಲ್ಲ. ಹಾಗಾದ್ರೆ ಏನು ತಿನ್ನಬೇಕು ಅನ್ನೋದನ್ನು ಕೀಹೋಲ್ ಕನ್ನಡ ನಿಮಗೆ ತಿಳಿಸುತ್ತೆ.
ಹಾಗಾದ್ರೆ, ಕೋವಿಡ್ ಸೋಂಕಿತರು ಯಾವ ಆಹಾರ ಸೇವನೆ ಮಾಡಬೇಕು ಅನ್ನ ಬಗ್ಗೆಯೂ ಪುಟ್ಟ ಮಾಹಿತಿ ಇಲ್ಲಿದೆ. ಈಕೆಳಗಿನ ಆಹಾರಗಳು ರೋಗಿಗಳ ನಿರೋಧಕ ಶಕ್ತಿ, ಮನೋದಾರ್ಢ್ಯತೆ ಮತ್ತು ಸ್ನಾಯು ಬೆಳವಣಿಗೆಗೆ ಅನುಕೂಲವಾಗಿದೆ.
ಕೊರೊನಾ ಕಾಲದಲ್ಲಿ ಸೋಂಕಿತರು ತಿನ್ನುವ ಆಹಾರದಲ್ಲಿ ರಾಗಿ, ಓಟ್ಸ್ ಮತ್ತು ಅಮರಾಂತ್ ಮೊದಲಾದ ಏಕದಳ ಧಾನ್ಯಗಳನ್ನು ಬಳಸಬೇಕಿದೆ.
ಪ್ರೋಟಿನ್ ಹೆಚ್ಚ್ಆಗಿರೋಆಹಾರ ಕೂಡಾ ಹೆಚ್ಚಾಗಿ ಸೇವಿಸಿ. ಪ್ರೋಟಿನ್ ಯುಕ್ತ ವಸ್ತುಗಳಲ್ಲಿ ಪನೀರ್, ಚಿಕನ್, ಮೊಟ್ಟೆ, ಮೀನು, ಸೋಯಾ, ಒಣಬೀಜ ಮತ್ತು ಹಣ್ಣುಗಳು ಮುಖ್ಯವಾದುದು.
ಕೊರೊನಾ ಕಾಲಕ್ಕೆ ಒಂದಿಷ್ಟು ಆರೋಗ್ಯಕಾರಿ ಕೊಬ್ಬಿನಾಂಶ ಕೂಡಾ ಇರಲೇಬೇಕು. ಅದಕ್ಕಾಗಿ ಬಾದಾಮಿ, ಆಕ್ರೋಟು, ಆಲಿವ್ ಎಣ್ಣೆ ಮತ್ತು ಸಾಸಿವೆ ಎಣ್ಣೆ ಆಹಾರದಲ್ಲಿ ಬಳಸಿ.
ನಿಮಗೆ ಅನುಕೂಲವಾಗುವಂತೆ ದೈಹಿಕ ಚಟುವಟಿಕೆ ಇರಲಿ. ಅದರಲ್ಲಿ ಯೋಗ ಮತ್ತು ಉಸಿರಾಟದ ವ್ಯಾಯಾಮ ಬಹಳ ಮುಖ್ಯವಾಗಿರುತ್ತೆ.
ಕೊರೊನಾ ಕಾಲಕ್ಕೆ ಸೋಂಕಿತರಿಗೆ ವಿಟಮಿನ್ ಮತ್ತು ಖನಿಜಾಂಶ ಕೂಡಾ ಅಗತ್ಯವಾಗಿರುತ್ತೆ. ಅದಕ್ಕಾಗಿ ನೀವು ಕನಿಷ್ಟ 5 ಬಣ್ಣದ ಹಣ್ಣುಮತ್ತು ತರಕಾರಿಯನ್ನು ಕನಿಷ್ಟ 5 ಬಾರಿಯಾದರೂ ಸಣ್ಣ ಪ್ರಮಾಣದಲ್ಲಿ ಸ್ವೀಕರಿಸಿ.
ದಿನಕ್ಕೊಂದು ಬಾರಿ ಪುಟ್ಟ ಪೀಸ್ ಡಾರ್ಕ್ ಚಾಕಲೇಟ್ ಸೇವಿಸಿ. ನೀವು ಪ್ರತಿಶತ 70ರಷ್ಟು ಕೋಕೋ ಇರುವ ಚಾಕಲೇಟ್ ನಿಮ್ಮ ಆಯ್ಕೆಯಾಗಿರಲಿ.
ಸಾಧ್ಯವಾದ್ರೆ ಅಥವಾ ಇಷ್ಟವಾದ್ರೆಒಂದು ಗ್ಲಾಸ್ ಬಿಸಿ ಹಾಲಿಗೆ ಚಿಟಿಕೆ ಅರಿಶಿನ ಹಾಕಿ ಕುಡಿಯಿರಿ. ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತೆ.
ಸಾಮಾನ್ಯವಾಗಿ ಕೊರೊನಾ ಬಾಧಿಸಿದಾಗ ವಾಸನೆ ಗ್ರಹಿಸೋದು ಕಷ್ಟವಾಗುತ್ತೆ.ಅಲ್ಲದೇ ನುಂಗುವುದಕ್ಕೂ ಕಷ್ಟ. ಹಾಗಾಗಿ ಮೆತ್ತಗೆ ನುಣ್ಣಗಿರುವ ಆಹಾರವನ್ನೇ ಸೇವಿಸಿ.
ಕೊರೋನಾ ಕಾಲದಲ್ಲಿ ಸೇವಿಸುವ ಆಹಾರದ ಬಗ್ಗೆ ಉಪಯುಕ್ತ ಮಾಹಿತಿ ಇದು