What happens in Lonavala? Why not Priyamani’s character’s Secret Reveal? ಲೋನಾವಾಲದಲ್ಲಿ ಏನ್ ನಡೀತು? ಪ್ರಿಯಾಮಣಿ ಪಾತ್ರದ ಸೀಕ್ರೆಟ್ ರಿವೀಲ್ ಆಗಿಲ್ಲವೇಕೆ?

ಫ್ಯಾಮಿಲಿ‌ ಮ್ಯಾನ್ 2 ವೆಬ್ ಸಿರೀಸ್ ಎಲ್ಲೆಡೆ ಬೇಜಾನ್ ಸದ್ದು ಮಾಡಿತ್ತಿದೆ. ಸೀಸನ್ 1 ನೀಡಿದ ಮನರಂಜನೆಯೇ ಸೀಸನ್ 2 ಕೂಡ ನೀಡಿದೆ. ಆದ್ರೆ, ಸೀಸನ್ ಒಂದರಲ್ಲಿ ಸೃಷ್ಟಿಯಾಗಿದ್ದ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಹೌದು, ಫ್ಯಾಮಿಲಿ ಮ್ಯಾನ್ ಸೀಸನ್ ಒಂದರಲ್ಲಿ ಅರವಿಂದ್ ಪಾತ್ರದೊಂದಿಗೆ ಸುಚಿ ಅಂದ್ರೆ ಪ್ರಿಯಾಮಣಿ ಟ್ರಿಪ್ ಹೋಗಿದ್ದರು. ಆ ದಿನ ಅಲ್ಲಿ ಏನ್ ನಡೀತು? ಅನ್ನೋದನ್ನು ಸುಚಿ (ಪ್ರಿಯಾಮಣಿ) ತನ್ನ ಪತಿ ಶ್ರೀಕಾಂತ್ ತಿವಾರಿಗೆ ಹೇಳೊ ಪ್ರಯತ್ನ ಮಾಡ್ತಿದ್ದಾಳೆ. ಆದ್ರೆ ಅದು ಸಾಧ್ಯವಾಗುತ್ತಿಲ್ಲ.

ಈ ಪ್ರಶ್ನೆಗೆ ಫ್ಯಾಮಿಲಿ ಮ್ಯಾನ್ 2 ನಲ್ಲಾದ್ರೂ ಉತ್ತರ ಸಿಗ್ಬಹುದು ಎಂದು ಆಡಿಯನ್ಸ್ ನಿರೀಕ್ಷೆ ಮಾಡಿದ್ದರು. ಆದ್ರೆ, ಫ್ಯಾಮಿಲಿ ಮ್ಯಾನ್ ಸೀಸನ್ 2 ಮುಗಿದು ಮೂರನೇ ಸೀಸನ್ ಆರಂಭ ಆಗುತ್ತಿದೆ. ಆದ್ರೂ, ಈ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

ಫ್ಯಾಮಿಲಿಮ್ಯಾನ್ ಸೀರಿಸ್ ನಿರ್ದೇಶಕರು ರಾಜ್ ಹಾಗೂ ಡಿಕೆ ಇಬ್ಬರೂ ಈ ಪ್ರಶ್ನೆ ಉತ್ತರವನ್ನು ಗುಟ್ಟಾಗೇ ಇಟ್ಟಿದ್ದಾರೆ. ಎಲ್ಲರೂ ಸೆಕ್ಸ್ ಅನ್ನೇ ಪ್ರಮುಖವಾಗಿ ಆಲೋಚಿಸುತ್ತಾರೆ. ಆದ್ರೆ, ಇನ್ನೊಂದು ಅ್ಯಂಗಲ್ ನಲ್ಲಿ ಆಲೋಚನೆ ಮಾಡೋದಿಲ್ಲ. ಹೀಗಾಗಿ ಅವರವರ ಆಲೋಚನೆಗೆ ತಕ್ಕಂತೆ ಯೋಚಿಸಲು ಬಿಡಲಾಗಿದೆ ಎಂದು ತಿಳಿಸಿದ್ದಾರೆ.

+1

Leave a Reply

Your email address will not be published. Required fields are marked *

error: Content is protected !!