coronaNews ಕೊರೊನಾದ ಅದು ಇದು ಸುದ್ದಿ.. ಸಖತ್ ಮಾಹಿತಿ

 

 

 

ಕೊರೊನಾ (Civid-19) ಎರಡು‌ ವರ್ಷಗಳಿಂದ ಜನರನ್ನು ಕಾಡ್ತಾನೇ ಇದೆ. ಅದಕ್ಕೆ Vaccination _drive ನಡೀತಾನೇ ಇವೆ. ಮತ್ತೊಂದೆಡೆ Black_Fungus, White_Fungus, Yellow_Fungus ಅನ್ನೋ ನಾನಾ ಕಾಟಗಳನ್ನೂ ಅನುಭವಿಸಿದ್ದಾಗಿದೆ. ಈಗ ಈ‌ಗ ಕೊರೊನಾ ಅನ್ನೋ‌ ಕೊರೊನಾ Delta+ ಅನ್ನೋ ರೂಪದಲ್ಲೂ‌ಕಾಡ್ತಿದೆ. ಹಾಗಾದ್ರೆ ಇವತ್ತಿನ

ಮಹಾಮಾರಿ ಕೊರೊನಾ ಅಂಕಿ ಅಂಶಗಳು ಹೀಗಿವೆ

ದೈನಂದಿನ ಕೊರೊನಾ ಪ್ರಕರಣಗಳಲ್ಲಿ ಭಾರತ ಸ್ವಲ್ಪ ಕುಸಿತ ಕಂಡಿದೆ. 102 ದಿನಗಳ ನಂತರ ದೇಶವು ದಿನಕ್ಕೆ 40,000 ಕ್ಕಿಂತ ಕಡಿಮೆ ಹೊಸ ಪ್ರಕರಣಗಳನ್ನು ವರದಿ ಮಾಡಿದೆ. ಕಳೆದ 24 ಗಂಟೆಗಳಲ್ಲಿ ಭಾರತವು 37,566 ಹೊಸ ಕೊವಿಡ್‌-19 ಪ್ರಕರಣಗಳನ್ನು ವರದಿ ಮಾಡಿದೆ. ಇದೇ ಅವಧಿಯಲ್ಲಿ 907 ಸಾವುಗಳು ಸಂಭವಿಸಿವೆ, ಇದರಿಂದ ಒಟ್ಟು ಸಾವಿನ ಸಂಖ್ಯೆ 3,97,637 ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ 56,994 ಜನರು ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ. ಹಾಗಾಗಿ, ಸಕ್ರಿಯ ಪ್ರಕರಣಗಳು 5,52,659 ಕ್ಕೆ ಇಳಿದಿದ್ದು ದೇಶದ ಚೇತರಿಕೆ ಪ್ರಮಾಣ 96.87% ಕ್ಕೆ ಏರಿದೆ.

ಮುಂಬೈ ಪಾಲಿಕೆ ಮಕ್ಕಳಿಗೆ ಕೊರೊನಾ ಭಯದಲ್ಲಿ ಸರ್ವೆ

ಮುಂಬೈನಲ್ಲಿ ಶೇಕಡಾ 50ಕ್ಕಿಂತ ಹೆಚ್ಚು ಮಕ್ಕಳಲ್ಲಿ ಕೊರನಾದ ವಿರುದ್ಧದ ಪ್ರತಿಕಾಯಗಳು ಇವೆ ಎನ್ನುವುದು ಸೆರೋ ಸರ್ವೆಯಿಂದ ತಿಳಿದು ಬಂದಿದೆ. ಮುಂಬೈ ಪಾಲಿಕೆಯು ಸೆರೋ ಸರ್ವೆ ನಡೆಸಿದ್ದು, 10 ರಿಂದ 14 ವರ್ಷದವರಲ್ಲಿ ಪ್ರತಿಶತ 53ರಷ್ಟು ಸೆರೋ ಪಾಸಿಟಿವಿಟಿ ಇದೆ. 1ರಿಂದ 4 ವರ್ಷದೊಳಗಿನ ಮಕ್ಕಳಲ್ಲಿ ಪ್ರತಿಶತ 51ರಷ್ಟು ಸೆರೊ ಪಾಸಿಟಿವಿಟಿ ಇದೆಯೆಂದು ಹೇಳಲಾಗಿದೆ. ಒಂದರಿಂದ 18 ವರ್ಷದೊಳಗಿನ ಮಕ್ಕಳಲ್ಲಿ ಶೇಕಡಾ 51.18ರ ಸೆರೋ ಪಾಸಿಟಿವಿಟಿದೆಯೆಂದು ಸರ್ವೆ ತಿಳಿಸಿದೆ. ಅದ್ಕೆ ಕೂಲಾಗಿರಿ. ಮಕ್ಕಳ‌ Sero_serve ಸಮಾಧಾನ‌ ತಂದಿದೆ.


ಕೊವಿನ್ ಪೊರ್ಟಲ್ ಮೇರೆ ಬ್ಯಾರೆ ದೇಶಗಳ‌ ಆಸಕ್ತಿ

ಭಾರತದ ಕೊವಿನ್ ಪೋರ್ಟನ್‌ ಬಗ್ಗೆ ಈಗ ವಿಶ್ವದಾದ್ಯಂತ ಮೆಚ್ಚುಗೆ ಮಾತುಗಳು ಕೇಳಿ ಬರ್ತಿವೆ. ಇದರಿಂದ ಲಸಿಕೆಗಾಗಿ ನೋಂದಣಿ ಮಾಡಿಸಿಕೊಂಡು ತಮ್ಮ ಲಸಿಕೆಯನ್ನು ಖಾತ್ರಿ ಪಡಿಸಿಕೊಳ್ಳಬಹುದು. ಮತ್ತು ಲಸಿಕೆ ಹಾಕಿಸಿಕೊಳ್ಳಬಹುದು. ಈ ಕೊವಿನ್ ಪೋರ್ಟಲ್‌ ಈಗ ವಿದೇಶಗಳ ಗಮನ ಸೆಳೆದಿದೆ. ಮಧ್ಯ ಏಷ್ಯಾ ಲ್ಯಾಟಿನ್ ಅಮರಿಕ ಮತ್ತು ಆಫ್ರಿಕಾ ಸೇರಿದಂತೆ 50ಕ್ಕೂ ಹೆಚ್ಚು ದೇಶಗಳು ಕೊವಿನ್ ಪೋರ್ಟಲ್ ಅಳವಡಿಸಿಕೊಳ್ಳಲು ಆಸಕ್ತಿ ತೋರಿಸಿವೆ. ಆಸಕ್ತ ದೇಶಗಳಿಗೆ ಉಚಿತವಾಗಿ ಕೋವಿನ್ ಪೊರ್ಟಲ್ ತಂತ್ರಜ್ಞಾನ ನೀಡಲು ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ್ದಾರೆ. Covin_Portal ಗುಣಮಟ್ಟಕ್ಕೆ ಪ್ರಶಂಸೆ ವ್ಯಕ್ತವಾಗಿದೆ


ಕೊವಿಶೀಲ್ಡ್‌ ಲಸಿಕೆಗೆ UMA ಅನುಮೋದನೆ ಇಲ್ಲ

ಭಾರತದ ಸೇರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೊವಿಶೀಲ್ಡ್‌ ಲಸಿಕೆಗೆ ಯೂರೋಪಿಯನ್ ಮೆಡಿಸಿನ್ ಏಜೆನ್ಸಿಯ ಅನುಮೋದನೆ ಸಿಕ್ಕಿಲ್ಲ.ಯೂರೋಪಿಯನ್ ಮೆಡಿಸಿನ್ ಏಜೆನ್ಸಿ 4 ಕೋವಿಡ್‌ ಲಸಿಕೆಗಳಿಗೆ ಮಾತ್ರ ಅನುಮೋದನೆ ನೀಡಿದೆ. ಆದ್ರೆ ಕೊವಿಶೀಲ್ಡ್‌ಗೆ ಮಾರ್ಕೆಟಿಂಗ್ ಅನುಮೋದನೆ ನೀಡಿಲ್ಲ. ಯೂರೋಪಿಯನ್ ಮೆಡಿಸಿನ್ ಏಜೆನ್ಸಿಯ ನಿಯಮಗಳ ಪ್ರಕಾರ ಅವರು ಲಸಿಕಾ ನಿರ್ಮಾಣ ಘಟಕವನ್ನು ಪರಿಶೀಲಿಸಬೇಕು, ಅದ್ರ ಉತ್ಪಾದನಾ ಪ್ರಕ್ರಿಯೆಯನ್ನು ಗಮನಿಸಿದ ಬಳಿಕ ಅದಕ್ಕೆ ಒಪ್ಪಿಗೆ ನೀಡಲಾಗುವುದು ಎನ್ನಲಾಗಿದೆ‌

ಹೀಗೆ ಕೊರೊನಾ ಬೆಳವಣಿಗೆಗಳ ನಡುವೆ ಇವು ಮಹತ್ವ ದ ಸಂಗತಿಗಳು. ಕೂಲಾಗಿದ್ರೆ ಜಗತ್ತೂ‌ ಕೂಲಾಗಿರುತ್ತೆ

+2

Leave a Reply

Your email address will not be published. Required fields are marked *

error: Content is protected !!