ಬಿಗ್ ಬಾಸ್ ಕನ್ನಡ ಸೀಸನ್ 8 ತನ್ನ ಎರಡನೇ ಇನ್ನಿಂಗ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸಲು ಪ್ರಯತ್ನಿಸುತ್ತಿದೆ.
ಅದಕ್ಕೂ ಮುನ್ನ ಮುಂಬರುವ ಕಂತಿನಲ್ಲಿ ಅರವಿಂದ್ ಕೆಪಿ ಮತ್ತು ದಿವ್ಯಾ ಉರುಡುಗಾ ನಡುವಿನ ಅನಿರೀಕ್ಷಿತ ಘಟನೆಯೊಂದಕ್ಜೆ ಬಿಗ್ ಬಾಸ್ ಸಾಕ್ಷಿಯಾಗಲಿದೆ. ಟಾಸ್ಕ್ ಮತ್ತು ಫನ್ ಜೊತೆ ಬಿಗ್ ಬಾಸ್ ಮನೆಯೊಳಗೆ ಇದು ಮತ್ತೊಂದು ಸಾಮಾನ್ಯ ದಿನದಂತೆ ಕಾಣುತ್ತಿದ್ದರೂ ‘ಸೂರ್ಯಸೇನೆ’ ತಂಡವು ತಮ್ಮ ಎದುರಾಳಿ ತಂಡ ‘ಕ್ವಾಟ್ಲೆ ಖಿಲಾಡಿಗಳು ಎದುರು ಟಾಸ್ಕ್ ಸೋತಾಗ ಅಲ್ಲಿ ಪರಿಸ್ಥಿತಿ ಕಾವೇರುವ ಸಾಧ್ಯತೆಯಿದೆ.
ಆನ್‌ಲೈನ್‌ನಲ್ಲಿ ಪ್ರಸಾರವಾ ಇತ್ತೀಚಿನ ಪ್ರೋಮೋವೊಂದರಲ್ಲಿ, ದಿವ್ಯಾ ಉರುಡುಗಾ ಅವರು ಅರವಿಂದ್ ಕೆಪಿ ಬಗ್ಗೆ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ. ಅರವಿಂದ್ ಕೆಪಿ ಟಾಸ್ಕ್ ನಿಯಮಗಳನ್ನು ಸರಿಯಾಗಿ ಪಾಲಿಸಿಲ್ಲ ಎಂದು ದಿವ್ಯಾ ದೂರಿದ್ದಾರೆ. ನಿಧಿ ಸುಬ್ಬಯ್ಯ ಕುರಿತು ಅರವಿಂದರ ಟೀಕೆಗಳನ್ನೂ ಅವರು ಉಲ್ಲೇಖಿಸುತ್ತಾರೆ.
ಅರವಿಂದ್ ಮತ್ತು ದಿವ್ಯಾ ಉರುಡುಗಾ ನಡುವೆ ಏನೋ ಬದಲಾಗಿದೆ ಅನ್ನುವ ಹಾಗೆ ಸಣ್ಣ ಎಳೆಯೊಂದು ಕಂಡುಬರುತ್ತಿದೆ. ಹಾಗಾಗಿ ಕೊನೆಯವರೆಗೆ ಈ ಜೋಡಿ ಒಟ್ಟಿಗೆ ಉಳಿಯುತ್ತದೆಯೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗಿದೆ.
ಏತನ್ಮಧ್ಯೆ, ಹಿಂದಿನ ಸಂಚಿಕೆಯಲ್ಲಿ, ಟೀಮ್ ಕ್ವಾಟ್ಲೆ ಖಿಲಾಡಿಗಳು ಇತ್ತೀಚಿನ ‘ಹಾಡು ಆಟ ಹಾಡು’ ಟಾಸ್ಕ್ ನಲ್ಲಿ ತಮ್ಮ ಎದುರಾಳಿ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾಗಿದ್ರು.
ಉಭಯ ತಂಡಗಳು ಟಾಸ್ಕ್ ಆನಂದಿಸುತ್ತಿದ್ದಂತೆ, ಅದರ ಕೊನೆಯಲ್ಲಿ, ಕ್ವಾಟ್ಲೆ ಖಿಲಾಡಿಗಳು ಮುನ್ನಡೆ ಸಾಧಿಸಿದರು. ಅಂತಿಮವಾಗಿ, ಅವರನ್ನು ಟಾಸ್ಕ್ ನ ವಿಜೇತರು ಎಂದು ಘೋಷಿಸಲಾಯಿತು. ಮೆಚ್ಚುಗೆಯ ಸಂಕೇತವಾಗಿ, ತಂಡಕ್ಕೆ ನಕ್ಷತ್ರವನ್ನು ಬಹುಮಾನವಾಗಿ ನೀಡಲಾಯಿತು. ಇದು ಕ್ವಾಟ್ಲೆ ಖಿಲಾಡಿಗಳು ಆಟದ ಮೊದಲ ಸ್ಟಾರ್ ಪಡಕೊಂಡಿದ್ದಾರೆ.