ಕುಕ್ಕರಿನಲ್ಲಿ ದಿನಾ ಅಡುಗೆ ಮಾಡ್ತೀರಿ.. ಕುಕ್ಕರ್ ಬಗ್ಗೆ ಇಷ್ಟೂ ತಿಳ್ಕೊಂಡಿಲ್ಲವೆಂದಾದರೆ ಹೇಗೆ..?

ದಿನಾ ಅಡುಗೆಗೆ ಬಳಸುವ ಕುಕ್ಕರ್ ಬಗ್ಗೆ ಇಷ್ಟೂ ಗೊತ್ತಿಲ್ಲವೆಂದಾದರೆ ಅಪಾಯ

ನಾವೆಲ್ಲಾ ಮಾಡ್ರನ್ ಲೈಫ್ ಫಾಲೋ ಮಾಡ್ತಾ ಇದ್ದೇವೆ. ಸಿಂಪಲ್ ಆಗಿ ಹೇಳೋದಿದ್ರೆ ಎಲ್ಲಾ ಮಾಡ್ರನ್ ಎಕ್ವಿಪ್ ಮೆಂಟ್ ಕೂಡಾ ಬಳಸ್ತಾ ಇದ್ದೇವೆ. ಆದ್ರೂ ಕೂಡಾ ಈಗಲೂ ಫ್ರೆಷರ್ ಕುಕ್ಕರ್ ಬ್ಲಾಸ್ಟ್ ಆಗಿ ಜನ ಗಾಯಗೊಂಡಿರೋದು, ಜನ ಸಾವಿಗೀಡಾಗಿರೋ ಸಂಗತಿಯನ್ನು ಕೇಳ್ತಾ ಇರ್ತೇವೆ. ಹಾಗಾದ್ರೆ, ನಾವು ಇ ಮಾಡ್ರನ್ ಲೈಫ್ ಗೆ ಅಪ್ ಡೇಟ್ ಆಗಿಲ್ವಾ…? ಇಲ್ಲಾ ತುಂಬಾ ಕ್ಯಾರ್ಲೆಸ್ ಆಗಿದ್ದೀವಾ..? ಇಲ್ಲಾ ಇನ್ನೂ ಕುಕ್ಕರ್ ಯೂಸ್ ಮಾಡೋ ಬಗ್ಗೆ ತಿಳಿದೇ ಇಲ್ವಾ..? ಹಾಗಾದ್ರೆ ಕುಕ್ಕರ್ ಬಳಸುವ ವಿಧಾನವನ್ನು ನಾವು ನಿಮಗೆ ಹೇಳಲೇ ಬೇಕು..

ಕುಕ್ಕರ್ ಬಳಕೆಗೂ ಮುನ್ನ ಒಮ್ಮೆ ಪರೀಕ್ಷಿಸಿ..

ಯೆಸ್ ಕುಕ್ಕರ್ ಅಂತೂ ನಿತ್ಯ ಬಳಕೆಯ ವಸ್ತು. ಅದರ ಬಗ್ಗೆ ಕ್ಯಾರ್ ಲೆಸ್ ಬೇಡ. ನೀವು ಕುಕ್ಕರ್ ಬಳಸೋಕೂ ಮೊದಲು ಒಂದು ಬಾರಿ ಅದ್ರ ರಬ್ಬರ್ ಗಾಸ್ಕೆಟ್ ಚೆಕ್ ಮಾಡಿ. ಒಂದು ವೇಳೆ ಅದು ಹೆಚ್ಚು ಡ್ರೈ ಆಗಿದ್ರೆ ಅದನ್ನು ನೀರಿನಿಂದ ಒದ್ದೆ ಮಾಡಿ. ಕುಕ್ಕರ್ ಗೆ ಬಳಸುವ ಗಾಸ್ಕೆಟನ್ನು ನೀವು ಕನಿಷ್ಟ ವರ್ಷಕ್ಕೊಮ್ಮೆಯಾದ್ರೂ ಬದಲಾಯಿಸಲೇಬೇಕು. ಹಾಗೆ ಮಾಡುವುದರಿಂದ ನಿಮ್ಮ ಕುಕ್ಕರ್ ಸೇಫ್ ಆಗಿರುತ್ತೆ..

ನಿಮ್ಮಲ್ಲಿರೋ ಕುಕ್ಕರಿನಲ್ಲಿ ಎಷ್ಟು ಆಹಾರ ಬೇಯಿಸಬಹುದು..?

ನೀವು ಕುಕ್ಕರ್ ಕೊಂಡು ಕೊಳ್ಳುವಾಗಲೇ ನಿಮ್ಮ ಮನೆ ಮಂದಿಗೆ ಸಾಕಾಗುವಷ್ಟು ಅಡುಗೆ ಮಾಡುವ ಕುಕ್ಕರ್ ಕೊಂಡು ಕೊಳ್ಳಿ. ಅದು ಬಿಟ್ಟು ಕುಕ್ಕರ್ ಗಾತ್ರಕ್ಕೂ ಹೆಚ್ಚುವರಿ ಆಹಾರ ಬೇಯಿಸಲು ಹೋಗಬೇಡಿ. ಸಾಮಾನ್ಯವಾಗಿ ಕುಕ್ಕರ್ ನಲ್ಲಿ ಅಡುಗೆ ಮಾಡುವಾಗ ಅದ್ರ ಮೂರನೇ ಎರಡರಷ್ಟು ಆಹಾರ ಮಾತ್ರ ಬೇಯಿಸಿ. ಅದು ಸೇಫ್. ಅದಕ್ಕಿಂತ ಹೆಚ್ಟು ಬೇಯಿಸಿದ್ರೆ ಅದು ಹಬೆ ಹೊರ ಬರುವ ದ್ವಾರವನ್ನೇ ಬ್ಲಾಕ್ ಮಾಡಬಹುದು. ಇದರಿಂದ ಕುಕ್ಕರ್ ಸಿಡಿಯುವ ಸಾಧ್ಯತೆ ಇದೆ. ಹಾಗೆ ನೀವು ಕೆಲವೊಂದು ಕಾಳು ಧಾನ್ಯ ಬೇಯಿಸುವಾಗ ಅದು ಗಾತ್ರದಲ್ಲಿ ಹಿಗ್ಗುತ್ತೆ ಅನ್ನೋದು ನೆನಪಿರಲಿ.

ಯಾವೆಲ್ಲಾ ಆಹಾರ ಕುಕ್ಕರಿನಲ್ಲಿ ಬೇಯಿಸಬಾರದು..?

ಕುಕ್ಕರ್ ಇದೆ ಅಂತ ಎಲ್ಲಾ ಆಹಾರಗಳನ್ನು ಕುಕ್ಕರ್ ನಲ್ಲಿ ಬೇಯಿಸೋಕೆ ಹೋಗಬೇಡಿ. ಕೆಲವೊಂದು ಆಹಾರ ಪದಾರ್ಥಗಳು ಬೇಯುತ್ತಾ ಕುಕ್ಕರ್ ನ ಹಬೆ ದ್ವಾರದಲ್ಲಿ ಸಿಕ್ಕು ಹಾಕಿಕೊಂಡು ಬ್ಲಾಸ್ಟ್ ಆಗುವ ಸಾಧ್ಯತೆಗಳಿವೆ. ಉದಾಹರಣೆಗೆ ಪಾಸ್ತಾ, ಸ್ಪೆಗೆಟ್ಟಿ, ಅರ್ಧ ಬಟಾಣಿ, ಓಟ್ ಮೀಲ್, ಕ್ರಾನ್ ಬೆರಿ ಮೊದಲಾದ ವಸ್ತುಗಳನ್ನು ಕುಕ್ಕರ್ ನಲ್ಲಿ ಬೇಯಿಸದೇ ಇದ್ರೆ ಉತ್ತಮ. ಒಂದು ಈ ಆಹಾರಗಳನ್ನು ಕುಕ್ಕರಿನಲ್ಲಿ ತಯಾರಿಸೋದಿದ್ರೂ ಅದು ಬೇಯುತ್ತಾ ಹಿಗ್ಗುವ ಕಾರಣ ಜಾಗ್ರತೆ ವಹಿಸಿ.

ಕುಕ್ಕರಿನಲ್ಲಿ ಎಷ್ಟು ಪ್ರಮಾಣದ ನೀರಿರಬೇಕು..?

ಕುಕ್ಕರ್ ಬಳಸಿ ಯಾವುದೇ ಅಡುಗೆ ಮಾಡೋದಿದ್ರೂ ಅದರಲ್ಲಿ ಆಹಾರ ಬೇಯುವಷ್ಟು ಪ್ರಮಾಣದ ನೀರಿನಾಂಶ ಇರಲೇ ಬೇಕು. ಯಾಕೆಂದ್ರೆ ಹಬೆ ಉತ್ಪನ್ನವಾಗಬೇಕಿದ್ರೆ ಅಷ್ಟು ನೀರು ಬೇಕಾಗುತ್ತೆ. ಹಾಗಾಗಿ, ಯಾವುದೇ ಆಹಾರ ಬೇಯಿಸುವಾಗ ಅದು ಬೇಯೋಕೆ ಎಷ್ಟು ಪ್ರಮಾಣದ ನೀರು ಬೇಕು ಅನ್ನೋದನ್ನು ಮೊದಲೇ ತಿಳಿದುಕೊಳ್ಳಿ. ಆಗ ಅವಘಡಗಳಿಂದ ಮುಕ್ತವಾಗಿರಬಹುದು.

ಕುಕ್ಕರ್ ಅಂದ್ರೆ ಕುಕ್ಕರ್ ಅಷ್ಟೇ ಅದು ಪಾನ್ ಅಲ್ಲ..!

ಕುಕ್ಕರ್ ಬೇಯಿಸೋಕೆ ಮಾತ್ರ ಇರೋ ಸಾಧನ. ಅದು ಬಿಟ್ಟು ಅದರಲ್ಲಿ ಯಾವುದಾದರೂ ಫ್ರೈ ಮಾಡೋದಿದ್ರೆ ಖಂಡಿತಾ ತಪ್ಪು. ಇದರಿಂದ ಗಾಸ್ಕೆಟ್ ಬಿಸಿಯೇರಿ ಕರಗುವ ಸಾಧ್ಯತೆಯಿದೆ. ಸ್ವಲ್ಪ ಎಣ್ಣೆಯಲ್ಲಿ ಕರಿಯಲು ಕುಕ್ಕರ್ ಬಳಸಿದ್ರೆ ಸ್ಫೋಟವಾಗುವ ಸಾಧ್ಯತೆ ಹೆಚ್ಚು.

ಕುಕ್ಕರ್ ಮುಚ್ಚುವುದು ಹೇಗೆ ಗೊತ್ತಾ..?

ದಿನಾನಿತ್ಯ ಕುಕ್ಕರ್ ಬಳಸ್ತೀವಿ ಅನ್ನೋ ಕಾರಣಕ್ಕೆ ಕ್ಯಾರೆಲೆಸ್ ಬೇಡ. ಅಂದ ಹಾಗೆ ನೀವು ಕುಕ್ಕರ್ ಮುಚ್ಚುವಾಗ ಯಾವ ಕ್ರಮ ಕೈಗೊಳ್ಳುತ್ತೀರಿ..? ಆ ಬಳಿಕ ಅದರ ಮುಚ್ಚಳ ಮುಚ್ಚಿ ಅದ್ರ ಲಿಡ್ ಕೂಡಾ ಮುಚ್ಚುತ್ತೀರಾ..? ಇಲ್ಲೇ ನೀವು ತಪ್ಪು ಮಾಡೋದು.. ನೀವು ಮಾಡಬೇಕಾದದ್ದು ಇಷ್ಟೇ ಮೊದಲಿಗೆ ಬೇಕಾದಷ್ಟು ನೀರಿನೊಂದಿಗೆ ಆಹಾರವನ್ನು ಕುಕ್ಕರಿನಲ್ಲಿ ಬೇಯಿಸೋಕೆ ಇಡ್ತೀರಿ ತಾನೆ..? ಅದರ ಮುಚ್ಚಳ ಕೂಡಾ ಮುಚ್ಚಿ ಆದ್ರೆ, ಅದ್ರ ಲಿಡ್ ಮಾತ್ರ ಜೊಡಿಸಬೇಡಿ. ಫುಡ್ ಒಂದು ಕುದಿ ಬಂದು ಹಬೆ ಉಕ್ಕಿದ ಬಳಿಕ ಲಿಡ್ ಮುಚ್ಚಿ. ಇದು ಯೋಗ್ಯ ಕ್ರಮ..

ಕುಕ್ಕರ್ ತೆರೆಯುವಾಗ ಜಾಗ್ರತೆ ವಹಿಸಿ..

ಕುಕ್ಕರ್ ಮುಚ್ಚುವಾಗ ಹೇಗೆ ಜಾಗ್ರತೆ ವಹಿಸ್ತೀವೋ ಹಾಗೆ ಕುಕ್ಕರ್ ತೆರೆಯುವಾಗ ಇನ್ನಷ್ಟು ಜಾಗ್ರತೆ ವಹಿಸಬೇಕಾಗುತ್ತೆ. ಅದರಲ್ಲಿ ಮೂರು ವಿಧಾನಗಳಿವೆ. ಒಂದು ಮಾಮೂಲಿ ವಿಧಾನ. ಅಂದ್ರೆ ಕುಕ್ಕರ್ ನಲ್ಲಿ ಫುಡ್ ರೆಡಿಯಾದ ವಿಷಲ್ ಹೊಡೆದ ಬಳಿಕ ಅದ್ರ ಹಬೆ ತನ್ನಿಂದ ತಾನೇ ಶಾಂತವಾದ ಬಳಿಕ ಕುಕ್ಕರ್ ತೆರೆಯುವುದು. ಇದರಿಂದ ಕುಕ್ಕರ್ ಸೇಫ್ ಆಗಿರುತ್ತೆ. ಇದಲ್ಲದೆ ನೀವು ಬಿಸಿ ಕುಕ್ಕರಿನ ಮುಚ್ಚಳ ಮತ್ತು ಲಿಡ್ ಗೆ ನಿರಂತರ ತಣ್ಣೀರು ಸುರಿಯುವ ಮೂಲಕ ಸೇಫ್ ಆಗಿ ಕುಕ್ಕರ್ ತೆರೆಯಬಹುದು. ಕೊನೆಯ ವಿಧಾನ ಅಂದ್ರೆ ಕುಕ್ಕರ್ ಅರ್ಜೆಂಟಲ್ಲಿ ಕೆರೆಯಬೇಕಾದಾಗ ಬಳಸುವ ವಿಧಾನ. ಇದರ ಪ್ರಕಾರ ನೀವು ಅದರ ಲಿಡ್ ಬಲವಂತವಾಗಿ ತೆರೆದು ಹಬೆಯನ್ನು ಹೊರ ಹಾಕಿ ಕುಕ್ಕರ್ ತೆರೆಯುವ ವಿಧಾನ. ಇದು ಸ್ವಲ್ಪ ಡೇಂಜರ್.. ಅದರ ಜೊತೆಗೆ ಕುಕ್ಕರ್ ಕ್ಲೀನಾಗಿ ಇಟ್ಟುಕೊಳ್ಳುವುದು ಕೂಡಾ ಮುಖ್ಯವಾಗುತ್ತೆ..

 

+4

One thought on “ಕುಕ್ಕರಿನಲ್ಲಿ ದಿನಾ ಅಡುಗೆ ಮಾಡ್ತೀರಿ.. ಕುಕ್ಕರ್ ಬಗ್ಗೆ ಇಷ್ಟೂ ತಿಳ್ಕೊಂಡಿಲ್ಲವೆಂದಾದರೆ ಹೇಗೆ..?

Leave a Reply

Your email address will not be published. Required fields are marked *

error: Content is protected !!