ಕಾಲ‌ ಮೀರದಿರಲಿ.. ವಿನೋದ್ ಕುಮಾರ್ ಅವರ ಬರಹ

 ವಿಲಿಯಂ ಮತ್ತು  ಕರೋಲ್ ಸ್ಟೀವರ್ಟ್ ಎನ್ನುವ ಜೋಡಿಹಕ್ಕಿಗಳು ಇದ್ದರು.

ವಿಲಿಯಂ ಮತ್ತು  ಕರೋಲ್  ಚಿಕ್ಕಂದಿನಿಂದಲೇ ಒಬ್ಬರಿಗೊಬ್ಬರು ಪರಿಚಯವಿದ್ದವರಾಗಿದ್ದರು, ಯೌವ್ವನದಲ್ಲಿ ಪ್ರೀತಿಸಲಾರಂಭಿಸಿದರು.  ಒಟ್ಟೊಟ್ಟಿಗೆ ಸಾಕಷ್ಟು ಕೆಲಸಗಳನ್ನು ಮಾಡಿದರು. ನಲವತ್ತೈದು ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದರು. ಅವರು ಮುದ್ದಾದ ಜೋಡಿಗಳಾಗಿದ್ದರು.

ಮನೆಯಲ್ಲಿ ಅವರಿಗಿಷ್ಟ ಬಂದ ಸಂಗೀತಕ್ಕೆ ಜೊತೆಯಾಗಿ ನೃತ್ಯ ಮಾಡುತ್ತಿದ್ದರು. ವಿಲಿಯಂ ಪತ್ನಿಯನ್ನು ರಂಜಿಸಲೆಂದೆ ಹಾಡನ್ನು ಹಾಡುತ್ತಿದ್ದರು.

ವಿಲಿಯಂ ತನ್ನ ಪತ್ನಿಗಾಗಿ ಪ್ರತಿ ದಿನ ಬೆಳಿಗ್ಗೆ ಕಾಫಿ ತಯಾರಿಸಿಕೊಂಡು ಬಂದು ರೂಮಿನ ಬಳಿ ನಿಂತು ಬಾಗಿಲನ್ನು ಬೆರಳ ಗೆಣ್ಣಿನಿಂದ ಕುಟ್ಟಿ  “ರೂಮ್ ಸರ್ವಿಸ್ !” ಎಂದು ಹೇಳುತ್ತಾ ಕೊಡುತ್ತಿದ್ದರು.

ಅವರಿಬ್ಬರದೂ ಒಂದು ಅದ್ಭುತವಾದ  ಜೋಡಿಯಾಗಿತ್ತು.

ಅವರಿರುವ ಊರು ಅಮೆರಿಕಾದ ನ್ಯೂ ಹಾಂಪ್‍ಶೈರ್‍ನಲ್ಲಿ ಕೊರೊನಾ ಹೆಚ್ಚಾಗುತ್ತಿತ್ತು. ಆದರೂ ವಿಲಿಯಂ ಮತ್ತು  ಕರೋಲ್  ಕೋವಿಡ್  ಲಸಿಕೆಯನ್ನು ತೆಗೆದುಕೊಳ್ಳಬಾರದೆಂದು ಅದನ್ನು ನಿರಾಕರಿಸಿದರು, ಆಮೇಲೆ ಇಬ್ಬರಿಗೂ ಕೋವಿಡ್ ಒಟ್ಟಿಗೆ ಬಂದಿತು.  ನಂತರ ಇಡೀ ಕುಟುಂಬಕ್ಕೆ ಕೋವಿಡ್ ಬಂದಿತ್ತು.  ಪತ್ನಿ ಎರಡು ವಾರಗಳ ಕಾಲ ಐಸಿಯುನಲ್ಲಿದ್ದರೆ ಪತಿ ಎಂಟು  ದಿನಗಳ ಕಾಲ ಇದ್ದರು. ವಿಲಿಯಮ್ ರವರ ಶ್ವಾಸಕೋಶಗಳು ಮತ್ತು ಮೂತ್ರಪಿಂಡಗಳ ತೊಂದರೆಗಳು ಕೋವಿಡ್‍ನಿಂದಾಗಿ ಮತ್ತಷ್ಟು ಉಲ್ಬಣಗೊಂಡಿದ್ದವು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಆಸ್ಪತ್ರೆಯವರು ಅವರನ್ನು ಕೊನೆ ಘಳಿಗೆಯಲ್ಲಿ ನೋಡಲು ಬರುವಂತೆ ಕುಟುಂಬದವರಿಗೆ ತಿಳಿಸಿದರು.

ಕೊನೆಯ ದಿನದಂದು ಆಸ್ಪತ್ರೆಯ ಸಿಬ್ಬಂದಿಯವರು  ಈ ಜೋಡಿ ಹಕ್ಕಿಗಳ ಎರಡೂ ಹಾಸಿಗೆಗಳನ್ನು ಒಂದೇ ಕೋಣೆಯಲ್ಲಿ ಅಕ್ಕಪಕ್ಕದಲ್ಲಿ ಇರಿಸಿ, ಕರೋಲ್ ಕೈಯನ್ನು ವಿಲಿಯಮ್ ಕೈಯಲ್ಲಿ ಇರಿಸಲಾಯಿತು. ಒಬ್ಬರೊಬ್ಬರ ಕೈಗಳು ಸ್ಪರ್ಶವಾದ ತಕ್ಷಣ,  ವಿಲಿಯಮ್ ಕೊನೆಯುಸಿರೆಳೆದರು, ಇದಾದ ಕೇವಲ ಹತ್ತು ಸೆಕೆಂಡುಗಳ ನಂತರ ಕ್ಯಾರೋಲ್  ಕೊನೆಯುಸಿರೆಳೆದರು,

 ಇವುಗಳನ್ನೆಲ್ಲಾ ವಿವರಿಸಿದ ಮಗಳು ಮೆಲಿಸ್ಸಾ, ಕೊನೆಗೆ ಹೇಳಿದ್ದು :

“ಇದೆಲ್ಲಾ ಯಾಕೆ ಹೇಳ್ತಿದ್ದೀನಿ ಅಂದ್ರೆ ಎಲ್ಲರೂ ಅದಷ್ಟು ಬೇಗ ಲಸಿಕೆ ಹಾಕಿಸಿಕೊಳ್ಳಿರಿ ಅಂತ” ಎಂದಳು.

+7

Leave a Reply

Your email address will not be published. Required fields are marked *

error: Content is protected !!