ಉತ್ತರ ಕರ್ನಾಟಕದ ಅತೀ ದೊಡ್ಡ ಕೇಂದ್ರ ಬಿಂದು ಹುಬ್ಬಳ್ಳಿಯಲ್ಲೊಂದು ಭಾರಿ ಹಲ್ ಚಲ್ ನಡೆಯೋದಿದೆ. ಅದ್ಕೆ ಜುಲೈ 8 ಡೇಟೂ ಫಿಕ್ಸ್ ಆಗಿದೆ. ನೀವೂ ನಂಬ್ತೀರೋ ಬಿಡ್ತೀರೋ ಅಲ್ಲಿ ಹುಬ್ಬಳ್ಳಿನ ಹೂಬಳ್ಳಿ ಮಾಡೋ ಮಸ್ತ್ ಪ್ರಯತ್ನವೊಂದು ನಡೆದಿದೆ..ಹುಬ್ಬಳ್ಳಿ ಹೂಬಳ್ಳಿ ಹೇಗಾಯ್ತು ಅಂತ ನೋಡೋಕೆ ಪ್ರೇಕ್ಷಕ.ಮಹಾಶಯರು ಥಿಯೇಟರ್ ಕಡೆ ದಾಪುಗಾಲು ಹಾಕಬೇಕು. ನೀವು ಇನ್ನಿಲ್ಲದೇ ಕಾಯ್ತಾ ಇದ್ದ ಉತ್ತರ ಕರ್ನಾಟಕದ ಖಡಕ್ ಚಿತ್ರ ‘ಚೋಟಾ ಬಾಂಬೆ’ ತೆರೆಗೆ ಬರ್ತಿದೆ..
ನೀವು ಛೋಟಾ ಬಾಂಬೆ ನೋಡಲೇ ಬೇಕು ಅದಕ್ಕಿದೆ 9 ಕಾರಣ
ಅಪರೂಪ ಪ್ರಯತ್ನಗಳು ಕೆಲವೊಮ್ಮೆ ಅದ್ಭುತ ನಿರೀಕ್ಷೆ ಹುಟ್ಟಿಸುತ್ತವೆ. ಅದ್ಕೆ ಒಂದ ಎಕ್ಸಾಂಪಲ್ ಈ ಛೋಟಾ ಬಾಂಬೆ. ಉತ್ತರ ಕರ್ನಾಟಕದ ಹಿರಿಯ ಕಿರಿಯ ಪ್ರೌಢ ಕಲಾವಿದರನ್ನು ಜೊತೆ ಸೇರಿಸಿ ಚೊಕ್ಕವಾಗಿ ರೆಡಿಮಾಡಿದ ಚಿತ್ರವಿದು. ಯೂಸೂಫ್ ಖಾನ್ ಖಾಜಿ ಹಾಗೂ ಅಸಾದ್ ಖಾನ್ ಕಿತ್ತೂರು ಚಿತ್ರದ ನಿರ್ದೇಶಕರು. ಈ ಸಿನೆಮಾ ಯಾಕೆ ನೋಡಬೇಕೆಂದು ಅಂತ ಕಾರಣ ಸಮೇತ ನಾವು ಹೇಳ್ತೀವಿ..
ಕಾರಣ -1
ಅದ್ಭುತ ಟೈಟಲ್
ಚೋಟಾ ಬಾಂಬೆ ತುಂಬಾ ಕ್ಯಾಚಿ ಟೈಟಲ್. 15 ವರ್ಷದ ಹಿಂದೆ ಟೈಟಲ್ ನೋಂದಣಿ ಮಾಡಿಸಿದ್ದ ಡೈರೆಕ್ಟರ್ ಅದನ್ನು ನಿರಂತರ ರಿನೀವಲ್ ಮಾಡಿಸಿದ್ರಂತೆ! ಟೈಟಲನ್ನು ಹೆಚ್ಚಿನ ಮೊತ್ತಕ್ಕೆ ಕೇಳಿದ್ರೂ ಕೊಟ್ಟೇ ಇಲ್ಲವಂತೆ.
ಕಾರಣ -2
ನಿರ್ದೇಶಕರು ಬಾಲಿವುಡ್ ಅನುಭವಿ.
ಯೂಸೂಫ್ ಖಾನ್. ಮುಂಬೈನಲ್ಲಿ ರಂಗಭೂಮಿಯಲ್ಲಿ ತೊಡಗಿಕೊಂಡು ಬಾಲಿವುಡ್ ನ ಸಹವರ್ತಿಗಳ ಜೊತೆ ಚಲನಚಿತ್ರದ ಕೆಲಸಗಳಲ್ಲಿ ದುಡಿದವರು. ಎನ್ ಚಂದ್ರ, ನಾನಾ ಪಾಟೇಕರ್ ಜೊತೆ ಕೆಲಸ ಮಾಡಿದ ಅನುಭವವೂ ಇವರ ಜೋಳಿಗೆಯಲ್ಲಿದೆ. ನಿರ್ಮಾಪಕನಾಗಿ, ನಿರ್ದೇಶಕನಾಗಿ ಕ್ಯಾಪ್ಟನ್ ಆಫ್ ದಿ ಶಿಪ್ ಆಗಿ ಜೊತೆಗೆ ಖಳನಾಯಕನ ಪಾತ್ರ ನಿಭಾಯಿಸಿ ಸೈ ಅನಿಸಿಕೊಂಡವರು.
ಕಾರಣ – 3
ಶಿವು ಬೇರ್ಗಿ.. ಸಾಹಿತ್ಯ ಸಂಗೀತ
ಶಿವು ಬೇರ್ಗಿಯವರ ಸಾಹಿತ್ಯಕ್ಕೆ ಮಾಂತ್ರಿಕ ಶಕ್ತಿಯಿದೆ ಅಂತ ಲೋಕವೇ ಒಪ್ಪಿಕೊಂಡಿದೆ. ಅವರ ಚುಟು ಚುಟು ಹಾಡು ಉತ್ತರ ಕರ್ನಾಟಕದಲ್ಲಿ ಇತಿಹಾಸ ಸೃಷ್ಟಿ ಮಾಡಿದೆ. ಅವರ ಸಾರಥ್ಯದಲ್ಲಿ ಸಖತ್ ಹಾಡುಗಳು ಮೂಡಿ ಬಂದಿವೆ. ಹಾಡನ್ನು ದೃಶ್ಯ ರೂಪಕದಲ್ಲಿ ನೋಡೋಕೆ ನೀವು ಥಿಯೇಟರ್ ಬರಲೇ ಬೇಕು.
ಕಾರಣ -4
ಹುಬ್ಬಳ್ಳಿಯ ನಟ ನಟಿಯರ ದಂಡು..
ಚಿತ್ರದ ನಾಯಕ ನಟ ಸೂರಜ್ ಸಾಸನೂರ್. ಅದಾಗಲೇ ಸಿನೆಮಾದಲ್ಲಿ ನಟಿಸಿ ಅನುಭವವಿರುವ ಸೂರಜ್, ಉದ್ಯಮಿ, ನಟ ಹಾಗೂ ಘನ ಕುಟುಂಬದಿಂದ ಬಂದವರು. ಪಕ್ಕಾ ಲೋಕಲ್ ಹುಡುಗನಾಗಿ ಗೆದ್ದ ಅಭಿಷೇಕ್ ಜಾಲಿಹಾಳ್, ಹುಬ್ಬಳ್ಳಿ ಸಿಂಡ್ರೆಲ್ಲಾ ಶನಾಯ ಕಾಟ್ವೆ, ಯಶಸ್ವಿನಿ ಶೆಟ್ಟಿ ಹೀಗೆ ಹುಬ್ಬಳ್ಳಿಯ ಕಲಾವಿದರನ್ನು ನೋಡೋಕೆ ನೀವು ಸಿನೆಮಾಗೆ ಬರಲೇ ಬೇಕು.
ಕಾರಣ -5
ಫೈಟ್ ಮಾಸ್ಟರ್ ಕೌರವ ವೆಂಕಟೇಶ್
ಛೋಟಾ ಬಾಂಬೆ ಸಿನೆಮಾದಲ್ಲಿ ಬರೋಬ್ಬರಿ 5 ಫೈಟ್ ಸೀಕ್ವೆನ್ಸ್ ಇದೆ. ಅದನ್ನು ಅಚ್ಚುಕಟ್ಟಾಗಿ ಸಂಯೋಜಿಸಿರುವ ಕೌರವ ವೆಂಕಟೇಶ್ ನಿಜಕ್ಕೂ ಪ್ರೇಕ್ಷಜರಿಂದ ಶಹಬ್ಬಾಸ್ ಗಿರಿ ಗಿಟ್ಟಿಸಿಕೊಳ್ತಾರೆ.
ಕಾರಣ -6
ಮಜಾ ಮಸ್ತ್ ಲೊಕೇಶನ್
ಈ ಸಿನೆಮಾ ಲೋಕಲ್ ಲೊಕೇಶನ್ ಬಳಸಿಕೊಂಡು ದೃಶ್ಯ ವೈಭವ ಕಟ್ಟಿಕೊಟ್ಟಿದೆ. ಹುಬ್ಬಳ್ಳಿ, ಧಾರವಾಡ ಮತ್ತು ದಾಂಡೇಲಿಯಲ್ಲಿ ಯಾರೂ ಕಂಡಿರದ ಲೊಕೇಶನ್ ಆಯ್ಕೆ ಮಾಡಿ ಫಾರಿನ್ ಲೆವೆಲಿಗೆ ತೋರಿಸಲಾಗಿದೆ. ಈ ರಸದೌತಣಕ್ಕಾದ್ರೂ ಸಿನೆಮಾ ನೋಡಲೇ ಬೇಕು.
ಕಾರಣ -7
ಶಂಕ್ರು ಆದ ಛೋಟಾ ಬಾಂಬೆ ದೀಪಕ್
ಡಾನ್ ಅಣ್ಣನ ವಿಧೇಯ ವಿನಮ್ರ ಶಂಕ್ರುಆಗಿ ಕಾಣಿಸಿಕೊಳ್ತಾರೆ ಛೋಟಾ ಬಾಂಬೆ ದೀಪಕ್. ಮುನ್ನಾಬಾಯ್ ಗೆ ಸರ್ಕಿಟ್ ಹೇಗೋ ಹಾಗೆ ಇಲ್ಲಿಗೆ ಅಣ್ಣನಿಗೆ ಶಂಕ್ರು! ತರೆಯ ಮೇಲೆ ಈ ಪಾತ್ರ ನೋಡಲು ಪ್ರೇಕ್ಷಕರು ಬರಲೇ ಬೇಕು.
ಕಾರಣ -8
ಭರವಸೆಯ ಹೊಸ ಹುಡುಗ ಅಭಿಷೇಕ್
ಅಭಿಷೇಕ್ ಜಾಲಿಹಾಳ್ ಸಿನೆಮಾಗೆ ಹೊಸ ಪರಿಚಯವಾದ್ರೂ ಮೈಚಳಿ ಬಿಟ್ಟು ನಟಿಸಿದ್ದಾರೆ. ಫೈಟ್, ಡ್ಯಾನ್ಸ್ ಎಲ್ಲದರಲ್ಲೂ ಇವರು ಎತ್ತಿದ ಕೈ. ಈಗ ತಾನೇ ಕಾಲೇಜು ಮುಗಿಸಿದ ಅಭಿಷೇಕ್, ಇಡೀ ಸಿನೆಮಾದಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಅನಿಸಿಕೊಳ್ತಾರೆ. ಫ್ರೆಶ್ ಫೇಸಾದ್ರೂ ಭರವಸೆಯ ಕಲಾವಿದನಾಗಿ ನಮ್ಮ ಮುಂದಿದ್ದಾರೆ ನಟ ಅಭಿಷೇಕ್ ..
ಕಾರಣ-9
ವೃತ್ತಿಪರ ತಾಂತ್ರಿಕ ತಂಡದ ಬೆಂಬಲ
ಈ ಚಿತ್ರಕ್ಕೆ ಚೀಫ್ ಅಸೋಸಿಯೇಟ್ ಡೈರೆಕ್ಟರ್ ಆಗಿ ಗೋವಿಂದ್ ರಾಜ್ ಕೆಲಸ ನಿರ್ವಹಿಸಿದ್ದಾರೆ. ಗೌರಿವೆಂಕಟೇಶ್ ಅವರು ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ನೃತ್ಯ ಸಂಯೋಜನೆ ಸುರೇಶ್ ಅವರದ್ದು, ಇನ್ನೂ ಪ್ರಸಾದನದ ಜವಾಬ್ದಾರಿ ಬಸವರಾಜ್ ಹೊತ್ತರೆ, ಮೇರಿ ಗುಂಡಮಿ ಕೇಶಾಲಂಕಾರವನ್ನು ಅಚ್ಚುಕಟ್ಟಾಗಿ ಮಾಡಿ ಕೊಟ್ಟಿದ್ದಾರೆ. ರಾಜ್ ಕುಮಾರ್ ಮತ್ತುಅನಿಲ್ ಸಹನಿರ್ದೇಶಕರಾಗಿ ದುಡಿದಿದ್ದಾರೆ.
ಕೊನೆ ಹನಿ
ಛೋಟಾ ಬಾಂಬೆ ಹೊಸಬರ ಸಿನೆಮಾವಾದ್ರು ಒಳ್ಳೆ ಗುಣಮಟ್ಟದಲ್ಲಿದೆ. ಅದ್ಕೆ ಎಲ್ಲರೂ ಥಿಯೇಟರ್ ಗೆ ಬಂದು ಸಿನೆಮಾ ನೋಡಿ. ಪೈರಸಿ ಅಪರಾಧ ನೆನಪಿರಲಿ. ಇಡಿ ಚಿತ್ತಂಡಕ್ಕೆ ಕೀ ಕನ್ನಡ ಡಿಜಿಟಲ್ ತಂಡ ಶುಭ ಹಾರೈಸುತ್ತಿದೆ. ಶುಭವಾಗಲಿ.