ನಿಮ್ಮ ಮನೆಯಲ್ಲಿ ಅಲೊವೆರಾ ಬೆಳೆಸಬೇಕೆಂದು ನಿಮ್ಮ ಮನಸ್ಸಲ್ಲಿದೆ. ಆದ್ರೆ, ಆಗ್ತಿಲ್ಲ ಅನ್ನೋ ಕೊರಗಿದ್ರೆ ಇಲ್ಲಿದೆ 2 ಸರಳ ಮತ್ತು ಮೊದಲನೆಯದು ಬಾಳೆಹಣ್ಣಲ್ಲಿ ಅಲೋವೆರಾ ಬೆಳೆಸೋದು. ಹೇಗೆ ಅಂತೀರಾ..? ಒಂದು ಪಚ್ಚೆಬಾಳೆ ತೆಗೆದುಕೊಳ್ಳಿ. ಅದನ್ನು ನೀಟಾಗಿ ಕೊಯ್ದು ಚಚ್ಚೌಕಾಕರದ ಒಂದು ಪೀಸ್ ತೆಗೆಯಿರಿ.
ಅದಕ್ಕೆ ಒಂದು ಪುಟ್ಟ ಅಲೊವೆರಾದ ಒಂದು ಬೇರಿರುವ ಮೊಳಕೆ ತೆಗೆದು ಬಾಳೆಹಣ್ಣಿನ ಒಳಗೆ ಇಟ್ಟು ಬಿಡಿ. ಆ ಬಳಿಕ ಅದನ್ನು ಹಸಿ ಮಣ್ಣು ರೆಡಿ ಮಾಡಿರುವ ಪಾಟ್ ಒಳಕ್ಕೆ ಇಟ್ಟು ಅದರ ಮೇಲೆ ಬಿಡಿ ಬಿಡಿ ಮಣ್ಣು ಹಾಕಿ. ಈ ಬಾರಿ ನಿಮ್ಮ ಆಲೋವೆರಾ ಚೆನ್ನಾಗಿ ಬೆಳೆಯುತ್ತೆ. ನೀವದನ್ನು ಆರಾಮಾಗಿ ಬೆಳೆಸಬಹುದು. ಈ ನಡುವೆ ಫಾಟ್ ನಲ್ಲಿ ಒಂದು ರಂಧ್ರ ಕೊರೆಯೊದನ್ನು ಮರೆಯಬಾರದು ಅಷ್ಟೇ..!
ಈಗ ಮತ್ತೊಂದು ಐಡಿಯಾ ಹೇಳ್ತೀವಿ ಕೇಳಿ. ಈ ಬಾರಿ ನಾವಿಲ್ಲಿ ಬಾಳೆಹಣ್ಣಿನ ಬದಲಿಗೆ ಆಲೂಗಡ್ಡೆಯನ್ನು ತೆಗೆದುಕೊಡು ಅದಕ್ಕೆ ಚಚ್ಚೌಕಾಕಾರದಲ್ಲಿ ಕಟ್ ಮಾಡಿ. ಒಂದು ಪೀಸ್ ಕೊರೆದು ತೆಗೆಯಿರಿ. ಅದರ ಒಳಗೆ ಬೇರಿರುವ ಆಲೊವೆರಾದ ಮೊಳಕೆಯನ್ನು ಇಡಬೇಕು. ಬಳಿಕ ಅದನ್ನು ಆಲೂಗಡ್ಡೆ ಸಹಿತ ಮಣ್ಣಿನೊಳಗಿಡಿ. ಅದರ ಮೇಲೆ ಬಿಡಿ ಬಿಡಿ ಮಣ್ಣು ಹಾಕಿ ಮುಚ್ಚಿ. ಹೀಗೆ ಮಾಡಿದ್ರೂ ಸಾಕು ಅಲೊವೆರಾ ಚೆನ್ನಾಗೇ ಬೆಳೆಯುತ್ತೆ. ಜಸ್ಟ್ ಒಂದೇ ತಿಂಗಳು ಅಲೊವೆರಾ ಚೆನ್ನಾಗಿ ಬೆಳೆಯುತ್ತೆ.