ಟೀಂ ಕೀಹೋಲ್ ಮಹಿಳೆಯರಿಗೆ ಮನೆಗೆ ಅನುಕೂಲವಾಗುವಂಥ ಕೆಲವೊಂದು ಉಪಾಯಗಳನ್ನು ಹೇಳಿಕೊಡುತ್ತೆ. ಇವತ್ತು ನಾವು ಕೊಡ್ತಾ ಇರೋದು ನಿಮ್ಮ ಅಡುಗೆ ಮನೆಯ ಪ್ರಾಬ್ಲಮ್ ಮತ್ತು ಅದರ ಪರಿಹಾರ. ಅಂದ ಹಾಗೆ ಮನೆಯಲ್ಲಿ ಗ್ಯಾಸ್ ಅಡುಗೆ ತಾನೇ..? ದೀರ್ಘಕಾಲ ಅಡುಗೆ ಮಾಡುತ್ತಾ ಗ್ಯಾಸ್ ಬರ್ನಲ್ ಹೇಗಾಗುತ್ತೆ..? ಕರಕಲಾಗಿ ಹೋಗುತ್ತೆ ಅಲ್ವಾ..? ಅದನ್ನು ಕ್ಲೀನ್ ಮಾಡೋದೇ ಇವತ್ತಿನ ಟಾಸ್ಕ್..
ಆ ಬರ್ನಲನ್ನು ಒಂದು ಸ್ಟೀಲ್ ತಟ್ಟೆಗೆ ಹಾಕಿ. ಅದಕ್ಕೆ ಒಂಚೂರು ಬಿಸಿನೀರು ಹಾಕಿ. ಈಗ ಅದಕ್ಕೆ ಒಂದರ್ಧ ನಿಂಬೆಹಣ್ಣು ಹಿಂಡಿ. ಅದನ್ನು ಹಾಗೇ ಬಿಡಿ ಒಂದು ಹತ್ತು ನಿಮಿಷ. ಇದಾದ ಬಳಿಕ ಅದಕ್ಕೆ ಈಗ ನೀವು ಒಂದು ಪ್ಯಾಕೇಟ್ ಇನೋ ಸಾಲ್ಟ್ ಹಾಕಿ. ನೊರೆ ಬರೋದು ಕಾಮನ್..ಅದಕ್ಕೆ ಒಂಚೂರು ಚೂರಾಗಿ ಹಾಕ್ತಾ ಇರಿ. ನೊರೆ ಉಕ್ಕಿ ಹೊರಬಾರದಿರಲಿ.
ಇದಾದ ಬಳಿಕ ಅದನ್ನು 2 ಗಂಟೆ ಕಾಲ ಹಾಗೇ ಬಿಟ್ಟು ಬಿಡಿ. ಅದಾಗಲೇ ಅದರ ಜಿಡ್ಡು ಕರಗಲಾರಂಭಿಸುತ್ತೆ. ಕ್ಲೀನ್ ಆಗಲಾರಂಭಿಸುತ್ತೆ. ಆ ಬಳಿಕ ಅದನ್ನು ತೆಗೆದು ಹಾತ್ರೆ ತೊಳೆಯುವ ಸೋಪಿನಿಂದ ನೀಟಾಗಿ ತೊಳೆಯಿರಿ. ತೊಳೀತಾ ಇರಿ. ಖಂಡಿತವಾಗಿ ಅದು ಹೊಳೆಯುತ್ತೆ. ಇದಿಷ್ಟೇ ಇವತ್ತಿನ ಹ್ಯಾಕ್… ಟ್ರೈ ಮಾಡಿ. ಮಹಿಳೆಯರಿಗೆ ಖಂಡಿತಾ ಇಷ್ಟವಾಗುತ್ತೆ.
Yes