ಸೇಲಂ: ತಮ್ಮನೇ ಅಣ್ಣನನ್ನು ಪ್ರೀಜರ್ ಒಳಗೆ ಇರಿಸಿ ಸಾಯಿಸಲು ಪ್ರಯತ್ನಿಸಿದ ಘಟನೆ ಸೇಲಂನಲ್ಲಿ ವರದಿಯಾಗಿದೆ. ಅನಾರೋಗ್ಯ ಪೀಡಿತ ಅಣ್ಣ ಬೇಗ ಸಾಯಲಿ ಅನ್ನೋ ಕಾರಣಕ್ಕೆ ಫ್ರೀಝರ್ ಶವಪೆಟ್ಟಿಗೆ ತರಿಸಿ ಅದರಲ್ಲಿ ಇಟ್ಟು ಸಾಯಿಸುವ ಖತರ್ನಾಕ್ ಪ್ಲಾನ್ ಒಂದನ್ನು ತಮ್ಮನೇ ಮಾಡಿದ್ದ.
ಆದ್ರೆ ಅಣ್ಣ ಮಾತ್ರ ಗಟ್ಟಿ ಪಿಂಡ ಅದು ಹೇಗೋ ಬದುಕಿಕೊಂಡಿದ್ದ. 74. ವರ್ಷದ ಬಾಲಸುಬ್ರಹ್ಮಣಿಯನ್ ರಾತ್ರಿಯಿಡೀ ಫ್ರೀಝರ್ ಒಳಗಿದ್ದರೂ ಬದುಕಿ ಉಳಿದಿದ್ದ ಎನ್ನಲಾಗಿದೆ. ಸುಬ್ರಹ್ಮಣಿಯನ್ ಅನಾರೋಗ್ಯ ಪೀಡಿತನಾಗಿದ್ದು , ಇತ್ತೀಚೆಗಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ.
ಫ್ರೀಜರ್ ಶವಪೆಟ್ಟಿಗೆಯನ್ನು ಬಾಡಿಗೆಗೆ ಕೊಡುವ ಕಂಪನಿಯ ಏಜೆಂಟ್ ಬಂದಾಗ ಈ ಧಾರುಣ ಘಟನೆ ಬೆಳಕಿಗೆ ಬಂದಿದೆ. ಕೊಸರಾಡುತ್ತಾ ಉಸಿರಾಡಲು ಕಷ್ಟಪಡುತ್ತಿದ್ದ ವೃದ್ಧನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುಬ್ರಹ್ಮಣಿಯನ್ ತನ್ನ ತಮ್ಮ ಮತ್ತು ಅಂಗವಿಕಲ ಸಂಬಂಧಿ ಜೊತೆ ವಾಸವಾಗಿದ್ದ. ಇತ್ತೀಚೆಗೆ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದ.ಅಣ್ಣ ಇನ್ನೇನು ಸಾಯ್ತಾನೆ ಎಂದು ತಮ್ಮ ಶವಪೆಟ್ಟಿಗೆ ತರಿಸಿದ್ದ. ಆದರೆ, ಕೊನೆಗೆ ಬೇಗ ಸಾಯಲಿ ಎಂದು ಜೀವಂತವಾಗಿ ಫ್ರೀಝರೊಳಗೆ ಹಾಕಿದ್ದ. ಆದ್ರೂ ಅಣ್ಣ ಒದ್ದಾಡಿ ಬದುಕಿಕೊಂಡಿದ್ದ. ಏಜೆಂಟ್ ಬಂದ ಕಾರಣದಿಂದ ತಮ್ಮನ ಪ್ಲಾನ್ ಬಯಲಿಗೆ ಬಂದಿದೆ. ಆತ ಪೊಲೀಸರಿಗೆ ವಿಷಯ ತಿಳಿಸಿದ್ದು, ತನಿಖೆ ನಡೆಯುತ್ತಿದೆ. ತಮ್ಮನ ವಿರುದ್ಧ ನಿರ್ಲಕ್ಷ್ಯ ಹಾಗೂ ಬೇರೆಯವರ ಜೀವವನ್ನು ಅಪಾಯಕ್ಕೆ ಸಿಲುಕಿಸಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.