ಕೆಜಿಎಫ್ ಸಿನಿಮಾದಲ್ಲಿ ಸಾಕಷ್ಟು ಪಾತ್ರಗಳಿವೆ. ಒಂದಕ್ಕಿಂತ ಒಂದು ಭಿನ್ನ-ವಿಭಿನ್ನ. ಆದ್ರೆ, ಮೊನ್ನೆ ಬಿಡುಗಡೆಯಾದ ಕೆಜಿಎಫ್ ೨ ಟೀಸರ್ ನಲ್ಲಿ ಕೇವಲ ಒಂದು ಸೆಕೆಂಡ್ ಬಂದು ಹೋಗುವ ಪಾತ್ರ ಯಾವುದು ಅಂತ ಎಲ್ಲರೂ ತಲೆಕೆಡಿಸಿಕೊಂಡು ಕೂತಿದ್ದಾರೆ.
ಕಪ್ಪು ಬಟ್ಟೆ ತೊಟ್ಟಿರೋ ಆ ನಟಿ ಹೆಸರು ಈಶ್ವರಿ ರಾವ್. ರಜನಿಕಾಂತ್ ಜೊತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಇದು ಇವರ ಎರಡನೇ ಸಿನಿಮಾ. ಈ ಹಿಂದೆ ಎಸ್. ನಾರಾಯಣ್ ನಿರ್ದೇಶನದ ಮೇಘಮಾಲೆ ಸಿನಿಮಾದಲ್ಲಿ ಈಶ್ಚರಿ ರಾವ್ ನಟಿಸಿದ್ದರು.
ಕೆಜಿಎಫ್ ೨ ಸಿನಿಮಾದಲ್ಲಿ ಈಶ್ವರಿ ರಾವ್ ರಾವ್ ಪಾತ್ರದ ಹೆಸರೇನು ಅನ್ನೋ ಸೀಕ್ರೆಟ್ ತಿಳಿದು ಬಂದಿಲ್ಲ. ಆದ್ರೆ, ಚಿತ್ರದಲ್ಲಿ ಇವ್ರದ್ದೊ ಒಂದು ಪ್ರಮುಖ ಪಾತ್ರ ಅನ್ನೋ ನಿರೀಕ್ಷೆಯಿದೆ.
ಕೆಜಿಎಫ್ 2 ಪ್ರಮುಖ 5 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಹೀಗಾಗಿ ಎಲ್ಲಾ ಭಾಷೆಯಿಂದ್ಲೂ ಒಬ್ಬೊಬ್ಬರನ್ನ ಆಯ್ಕೆ ಮಾಡಿಕೊಳ್ಳಲಾಗಿದೆ.