ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಜೋಡಿಯಾಗಿ ಸಿನಿಮಾ ಮಾಡ್ತಿರೋದು ಗೊತ್ತೇ ಇದೆ. ಈಗಾಗ್ಲೇ ಚಿತ್ರಸ ಟೈಟಲ್ ಕೂಡ ಅನೌನ್ಸ್ ಆಗಿದೆ. ಅಷ್ಟರಲ್ಲಾಗ್ಲೇ ಮತ್ತೆ ಪ್ರಭಾಸ್ ಭೇಟಿಯಾಗಿ ಅಚ್ಚರಿ ಹುಟ್ಟಿಸಿದ್ದಾರೆ.
ಪ್ರಶಾಂತ್ ಸದ್ಯವೀಗ ಹೈದ್ರಾಬಾದ್ ನಲ್ಲಿ ಇದ್ದಾರೆ. ಪ್ರಭಾಸ್ ಅವ್ರನ್ನ ಭೇಟಿ ಮಾಡಲು ಹೈದ್ರಾಬಾದ್ ಗೆ ಬಂದಿರೋದ್ಯಾಕೆ ಅನ್ನೋದು ಕುತೂಹಲ ಎಲ್ಲರನ್ನೂ ಕಾಡುತ್ತಿದೆ.
ಅಷ್ಟಕ್ಕೂ ಪ್ರಭಾಸ್ ಮತ್ತೆ ಭೇಟಿ ಮಾಡಿದ್ದು ಸಲಾರ್ ಶೂಟಿಂಗ್ ವಿಷಯವಾಗಿಯೇ. ಜನವರಿ ಕೊನೆವಾರದಿಂದ ಶುರುವಾಗ್ಬೇಕಿದ್ದ ಸಿನಿಮಾ ಫೆಬ್ರವರಿ ಮೊದಲದಿಂದ ಶುರುವಾಗಲಿದೆ. ಈ ಕಾರಣಕ್ಕಾಗಿಯೇ ಪ್ರಭಾಸ್ ರನ್ನ ಭೇಟಿ ಮಾಡಿದ್ದು ಎನ್ನಲಾಗಿದೆ.
ಇನ್ನೊಂದ್ಕಡೆ ಸಲಾರ್ ಚಿತ್ರದ ಲೊಕೇಶನ್ ನೋಡಲು ಬಂದಿದ್ದಾರೆ ಎನ್ನಲಾಗಿದ್ದು, ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ಶುರುವಾಗಲಿದ್ಯಂತೆ.